ಗೂಂಡಾ ಕಾಯ್ದೆ ರದ್ದು: ಪುನೀತ್ ಕೆರೆಹಳ್ಳಿ‌ ಜೈಲಿನಿಂದ ಬಿಡುಗಡೆ

ಬೆಂಗಳೂರು: ಪುನೀತ್ ಕೆರೆಹಳ್ಳಿ ವಿರುದ್ಧದ ಗೂಂಡಾ ಕಾಯ್ದೆ ರದ್ದು ಮಾಡಿ ಪುನೀತ್ ಕೆರೆಹಳ್ಳಿಯನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಲಾಗಿದೆ.

FB IMG 1694942775951 Featured Story, State News

ಆದೇಶ ಪ್ರತಿಯಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ

“ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಇವರು ಕರ್ನಾಟಕ ಕಳ್ಳ ಭಟ್ಟಿ, ವ್ಯಾಪಾರಿಗಳ,ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ,ಕೊಳಚೆ ಪುದೇಶಗಳನ್ನು ಕಬಳಿಸುವವರ, ವಿಡಿಯೋ ಅಥವಾ ಆಡಿಯೋ ಪೈರೇಟ್ಸ್ ಚಟುವಟಿಕೆಗಳ ತಡ ಅಧಿನಿಯಮ, 1985ರ (1985ರ ಕರ್ನಾಟಕ ಅಧಿನಿಯಮ 12) 3ನೇ ಪ್ರಕರಣದ (1) ಮತ್ತು (2)ನೇ
ಉಪ ಪುಕರಣದಡಿಯಲ್ಲಿ ಪುನೀತ್ ಕುಮಾರ್ @ ಪುನೀತ್ ಕೆರೆಹಳ್ಳಿ, ಬಿನ್ ಪುಟ್ಟಸಿದ್ದಪ್ಪ ಹೆಚ್.ಎಸ್. 32 ವರ್ಷ, ಹಾಲಿ ವಿಳಾಸ: ನಂ.60, 2ನೇ ಕ್ರಾಸ್, ಗುರುರಾಘವೇಂದ್ರ ನಗರ, ಜೆ.ಪಿ.ನಗರ, 7ನೇ ಹಂತ,
ಬೆಂಗಳೂರು ನಗರ, ಸ್ವಂತ ವಿಳಾಸ:ನಂ.53, ಕೆರೆಹಳ್ಳಿ ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು,ಹಾಸನ ಜಿಲ್ಲೆ (ಹಾಲಿ ಕೇಂದ್ರ ಕಾರಾಗೃಹ, ಬೆಂಗಳೂರು ಇಲ್ಲಿ ಬಂಧನದಲ್ಲಿರುತ್ತಾರೆ) ಇವರ ವಿರುದ್ಧ
ಆದೇಶ ಸಂಖ್ಯೆ:08/ಸಿಆರ್‌ಎಂ(4)/ಡಿಟಿಎನ್/2023, ದಿನಾಂಕ:11.08.2023ರಲ್ಲಿ ಹೊರಡಿಸಿರುವ ಬಂಧನ ಆದೇಶವನ್ನು ಸದರಿ ಅಧಿನಿಯಮದ 3ನೇ ಪ್ರಕರಣದ 3ನೇ ಉಪ ಪಕರಣದನ್ವಯ
ಸರ್ಕಾರವು ಆದೇಶ ಸಂಖ್ಯೆ:ಹೆಚ್‌ಡಿ 396 ಎಸ್‌ಎಸ್‌ಟಿ 2023, ದಿನಾಂಕ:17.08.2023ರಲ್ಲಿ ಅನುಮೋದಿಸಿದ್ದು, ಸದರಿ ಅಧಿನಿಯಮದ 9ನೇ ಪುಕರಣದಡಿ ರಚಿತವಾದ ಸಲಹಾ ಮಂಡಳಿಯು
“ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ” ಎಂದು ದಿನಾಂಕ:13.09.2023ರ ವರದಿಯಲ್ಲಿ ಅಭಿಪ್ರಾಯಪಟ್ಟಿರುತ್ತದೆ.

ಆದುದರಿಂದ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 12ನೇ ನಿಯಮದ ಪ್ರಕಾತ ಅಧಿಕಾರವನ್ನು ಚಲಾಯಿಸಿ, ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಇವರು, ಪುನೀತ್ ಕುಮಾರ್ @ ಪುನೀತ್ ಕೆರೆಹಳ್ಳಿ ಬಿನ್ ಪುಟ್ಟಸಿದ್ದಪ್ಪ ಹೆಚ್.ಎಸ್. 32 ವರ್ಷ, ನಂ.60,
2ನೇ ಕ್ರಾಸ್, ಗುರುರಾಘವೇಂದ್ರ ನಗರ, ಜೆ.ಪಿ.ನಗರ, 7ನೇ ಹಂತ, ಬೆಂಗಳೂರು ನಗರ ಇವರ ವಿರುದ್ಧ
ಆದೇಶ ಸಂಖ್ಯೆ:08/ಸಿಆರ್‌ಎಂ(4)/ಡಿಟಿಎನ್/2023, ದಿನಾಂಕ:11.08.2023ರಲ್ಲಿ ಹೊರಡಿಸಿರುವ
ಬಂಧನ ಆದೇಶವನ್ನು ಹಿಂಪಡೆದು, ಈ ಪ್ರಕರಣಕ್ಕೆ ಅನ್ವಯವಾಗುವಂತೆ ಮಾತ್ರ ತಕ್ಷಣದಿಂದ ಜಾರಿಗೆ ಬರುವಂತೆ ಬಂಧಮುಕ್ತಗೊಳಿಸಿ ಆದೇಶಿಸಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.”

Latest Indian news

Popular Stories