Featured StorySports

ಖೇಲ್ ರತ್ನ ಹೆಸರು ಬದಲಾಯಿಸುವಲ್ಲಿ ಇದೆಯಾ ರಾಜಕೀಯ – ಈ ಕುರಿತು ರಾಜ್’ದೀಪ್ ಸರ್ದೇಸಾಯಿ ಹೇಳುವುದೇನು?

ನವದೆಹಲಿ: ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ಬದಲಾಯಿಸಿ ಮೇಜರ್ ದ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಾಯಿಸಲಾಗಿದೆ. ನಿಜವಾಗಿಯೂ ಇದೊಂದು ಉತ್ತಮ ನಿರ್ಧಾರ. ಭಾರತದ ಉತ್ತಮ ಹಾಕಿ ಪಟು ಹೆಸರು ಕೊಟ್ಟಿರುವುದು ಮಾದರಿ ಕೆಲಸವಾಗಿದೆ.

ಆದರೆ ಈ ಹೆಸರು ಬದಲಾವಣೆಯ ಹಿಂದೆ ಖಂಡಿತವಾಗಿಯೂ ರಾಜಕೀಯ ಆಯಾಮ ಕೂಡ ಇದೆ. ನರೇಂದ್ರ ಮೋದಿ ಸರಕಾರ ನೆಹರು ಕುಟುಂಬದ ಕುರಿತು ಹೊರ ಹಾಕುತ್ತಿರುವ ದ್ವೇಷ ಇದೀಗ ರಹಸ್ಯವಾಗಿ ಉಳಿದಿಲ್ಲ. ಸರಕಾರ ಈಗ ಜನರ ಭಾವನೆಯ ಲಾಭ ಪಡೆಯುವ ಉದ್ದೇಶದಿಂದ ಒಲಿಂಪಿಕ್ಸ್ ಸಂದರ್ಭದಲ್ಲಿ ಈ ಹೆಸರನ್ನು ಬದಲಾಯಿಸುವ ಯತ್ನ ಮಾಡಿದೆ. ಆಟವನ್ನು ರಾಜಕೀಯದಿಂದ ದೂರ ಇಡುವುದು ಮಾದರಿ ಕಾರ್ಯವಾಗಿದೆ.

ಆದರೆ ನಾವು ಮಾದರಿ ಸಮಾಜದಲ್ಲಿ ಬದುಕುತ್ತಿಲ್ಲವೆಂಬುವುದು ಕೂಡ ವಾಸ್ತವ. ಆ ಕಾರಣಕ್ಕಾಗಿ ಹಲವು ಸ್ಟೇಡಿಯಂಗಳಿಗೆ ಆಟಗಾರರ ಹೆಸರು ಇಡುವುದನ್ನು ಬಿಟ್ಟು ರಾಜಕಾರಣಿಗಳ ಹೆಸರನ್ನು ಇಡುತ್ತೇವೆ. ನೆಹರು-ಗಾಂಧಿಯ ಕಾಲದ ನಂತರ ಈ ಕ್ರಮ ಜಾರಿಗೆ ಬಂತು ಎನ್ನಬಹುದು. ಯಾಕೆ ಗುಜರಾತಿನ ಕ್ರಿಕೆಟ್ ಸ್ಟೇಡಿಯಂನ ಹೆಸರನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಇಡುವ ಬದಲು ಗುಜರಾತಿನ ಕ್ರಿಕೆಟ್ ದಂತಕಥೆ ವಿನು ಮನ್’ಕಂಡ್ ಅವರ ಹೆಸರನ್ನು ಇಡಲು ಮನಸ್ಸು ಮಾಡಬಾರದು? ಮೋದಿ ಸರಕಾರ ನಿಜವಾಗಿಯೂ ಕ್ರೀಡಾ ಸ್ಪೂರ್ತಿಯನ್ನು ಉತ್ತೇಜಿಸಲು ಯಾಕೆ ಪ್ರಯತ್ನಿಸಬಾರದು.ಈ ಮೂಲಕ ಹೆಸರು ಬದಲಾವಣೆಯಲ್ಲಿ ಯಾವುದೇ ರಾಜಕೀಯವಿಲ್ಲವೆಂದು ತೋರಿಸಬಹುದು. ಇಲ್ಲದಿದ್ದರೆ ಇದೊಂದು ಪ್ರಚಾರದ ಉದ್ದೇಶದಿಂದ ಮಾಡಲಾಗಿದೆ ಎಂದು ಭಾವಿಸಬೇಕಾಗುತ್ತೆಂದು ರಾಜ್’ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button