ನಾನು ಹಿಜಾಬ್ ನಿಷೇಧ ಧರ್ಮಾಧಾರಿತವಾಗಿ ಮಾಡಿಲ್ಲ, ಸಮವಸ್ತ್ರ ಆಧಾರಿತವಾಗಿ ಮಾಡಿದ್ದು; ಆಕೆ ಒಳ್ಳೆ ವಿದ್ಯೆ ಕಲಿಯಲಿ ಆಗ ಧರ್ಮಾಂಧತೆ ಬರಲ್ಲ – ಆಲಿಯಾ ಅಸ್ಸಾದಿಗೆ ರಘುಪತಿ ಭಟ್ ಪ್ರತಿಕ್ರಿಯೆ

ಉಡುಪಿ: ನಾನು ಹಿಜಾಬ್ ಧರ್ಮಾಧಾರಿತವಾಗಿ ಮಾಡಿಲ್ಲ, ಸಮವಸ್ತ್ರ ಆಧಾರಿತವಾಗಿ ಮಾಡಿದ್ದು; ಆಕೆ ಒಳ್ಳೆ ವಿದ್ಯೆ ಕಲಿಯಲಿ ಆಗ ಧರ್ಮಾಂದತೆ ಬರಲ್ಲ ಎಂದು ಆಲಿಯಾ ಅಸ್ಸಾದಿ ಮಾತಿಗೆ ಮಾಜಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ಆಕೆ ಕಾಲೇಜಿನ ಶಿಸ್ತು ತಪ್ಪಿದ್ದರಿಂದ ಹೀಗೆಲ್ಲಾ ಆಯಿತು. ನಾನು ಶಾಸಕನಾಗುವ ಮೊದಲೇ ಸಮವಸ್ತ್ರವಿತ್ತು ಅದನ್ನು ನಾನು ಜಾರಿಗೆ ತಂದದ್ದು ಎಂದು ಸ್ಪಷ್ಟನೆ ನೀಡಿದರು.

ಒಂದುವರೆ ವರ್ಷ ಹಿಜಾಬ್ ತೆಗೆದು ಆಕೆ ತರಗತಿಗೆ ಹೋಗುತ್ತಿದ್ದಳು, ಸಿ.ಎಫ್.ಐ ಪ್ರಭಾವದಿಂದ ಎರಡು ತಿಂಗಳಿಗೆ ಹಿಜಾಬ್ ಹಾಕಲು ಇಡೀ ರಾಜ್ಯದಲ್ಲಿ ಗಲಾಟೆ ಎಬ್ಬಿಸಿದಳು. ಆಕೆ ವಿದ್ಯೆ ಕಲಿಯಲಿ ಎಂದು ಹಾರೈಸುತ್ತೇನೆ. ನಾನು ಈಗಾಗಲೆ ಮೂರು ಬಾರಿ ಶಾಸಕನಾಗಿ ಜನ ಮನ್ನಣೆ ಪಡೆದಿದ್ದೇ‌ನೆ. ಆಕೆ ವಿದ್ಯೆ ಕಲಿತರೆ ಧರ್ಮಂಧತೆ, ದೇಶದ್ರೋಹದ ಭಾವನೆ ದೂರವಾಗುತ್ತದೆ ಎಂದು ಹೇಳಿದರು.

Latest Indian news

Popular Stories