ರಾಯಚೂರು: ಸಿಂಧನೂರು (Sindhanur) ತಾಲೂಕಿನ ಆರ್‌ಹೆಚ್ ಕ್ಯಾಂಪ್-1ರಲ್ಲಿ ಮುಸ್ಲಿಂ ಸಮುದಾಯದ (Muslim Community) ಸದಸ್ಯ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಹಿನ್ನೆಲೆ ಸಾಮಾನ್ಯ ವರ್ಗದ 19 ಜನ ಸದಸ್ಯರು ಸಾಮೂಹಿಕ ರಾಜೀನಾಮೆ (Mass Resignation) ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.
ಸಾಮಾನ್ಯ ವರ್ಗಕ್ಕೆ ಸಿಕ್ಕ ಮೀಸಲಾತಿ ಅಲ್ಪಸಂಖ್ಯಾತ ಸದಸ್ಯನ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯತ್‌ನ (Grama Panchayat) 19 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಒಟ್ಟು 38 ಸದಸ್ಯ ಸ್ಥಾನ ಹೊಂದಿರುವ ಆರ್‌ಹೆಚ್ ಕ್ಯಾಂಪ್-1 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಂಗ್ಲಾ ವಲಸಿಗರು ವಾಸಿಸುವ ಒಟ್ಟು 6 ಆರ್‌ಹೆಚ್ ಕ್ಯಾಂಪ್‌ಗಳನ್ನು ಒಳಗೊಂಡಿವೆ. 38 ಸ್ಥಾನಗಳಲ್ಲಿ 30 ಜನ ಹೀಗಾಗಿ 15 ವರ್ಷಗಳ ಬಳಿಕ ಸಾಮಾನ್ಯ ವರ್ಗಕ್ಕೆ ಸಿಕ್ಕ ಮೀಸಲಾತಿ ಕೈತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 3 ರಂದು ನಡೆದ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ರಾಜಕೀಯ ಒತ್ತಡಕ್ಕೆ ಕೆಲವರು ಮನಸ್ಸಿಲ್ಲದೆ ಮತ ಹಾಕಿದ್ದಾರೆ ಎಂದು ಆರೋಪಿಸಿರುವ ಸದಸ್ಯರು ಅಧ್ಯಕ್ಷ ಸ್ಥಾನದ ಆಯ್ಕೆ ರದ್ದುಗೊಳಿಸಿ ಪುನರ್ ಆಯ್ಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಸಾಮಾನ್ಯ ವರ್ಗ, 7 ಎಸ್ಸಿಎಸ್ಟಿ ಹಾಗೂ ಹಿಂದುಳಿದವರ್ಗ ಮತ್ತು ಒಬ್ಬರು ಅಲ್ಪಸಂಖ್ಯಾತ ಸದಸ್ಯರಿದ್ದಾರೆ.