ರೈಲಿನಲ್ಲಿ 4 ಜನರನ್ನು ಹತ್ಯೆ ಮಾಡಿದ ರೈಲ್ವೇ ಪೋಲೀಸ್ ವಜಾ

ಮುಂಬೈ:ಕಳೆದ ತಿಂಗಳು ಚಲಿಸುತ್ತಿರುವ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಸಿಂಗ್ ಅವರನ್ನು ವಜಾಗೊಳಿಸುವ ಆದೇಶವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಸೋಮವಾರ ಹೊರಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಸಿಂಗ್ ಈ ಹಿಂದೆ ಕನಿಷ್ಠ ಮೂರು ಶಿಸ್ತು ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದರು.

ಜುಲೈ 31 ರ ಮುಂಜಾನೆ ಮುಂಬೈನ ಹೊರವಲಯದಲ್ಲಿರುವ ಪಾಲ್ಘರ್ ನಿಲ್ದಾಣದ ಬಳಿ ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬಂದಾಗ ಸಿಂಗ್ (34) ತನ್ನ ಹಿರಿಯ ಅಧಿಕಾರಿ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದ ಆರೋಪ ಹೊತ್ತಿದ್ದಾರೆ.

ಮೂವರು ಪ್ರಯಾಣಿಕರಾದ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನಪುರವಾಲಾ, ಸಯ್ಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ರೈಲಿನ ವಿವಿಧ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಸಿಂಗ್ ಅವರನ್ನು ನಂತರ ಸರ್ಕಾರಿ ರೈಲ್ವೆ ಪೊಲೀಸರು (GRP) ಬಂಧಿಸಿದರು. ವಿಶ್ವದಲ್ಲೆ ಸುದ್ದಿಯಾದ ಈ ಅಪರಾಧದ ಹಿಂದಿನ ಉದ್ದೇಶ ಇನ್ನೂ ತನಿಖೆಯು ಸ್ಪಷ್ಟ ಪಡಿಸಿಲ್ಲ. ಆದರೆ ಇದು ದ್ವೇಷದ ಕಾರಣ ನಡೆದಿದೆ ಎಂಬ ವಿಶ್ಲೇಷಣೆ ನಡೆಸುತ್ತಿದೆ.

Latest Indian news

Popular Stories