Featured StoryState NewsVijayapura

ಕರ್ನಾಟಕ ಬಸ್’ಗೆ ಬೆಂಕಿ ಮಹಾರಾಷ್ಟ್ರ ಸರ್ಕಾರ ಖಂಡಿಸಬೇಕು: ಸಚಿವ ರಾಮಲಿಂಗಾರೆಡ್ಡಿ

 

ವಿಜಯಪುರ: ಕರ್ನಾಟಕ ಬಸ್ಗೆ ಬೆಂಕಿ ಹಾಕೋದಕ್ಕು ಮಹಾರಾಷ್ಟ್ರದ ಹೋರಾಟಕ್ಕು ಸಂಬಂಧ ಇಲ್ಲ, ನಮ್ಮ ಬಸ್ಗೆ ಬೆಂಕಿ ಹಾಕಿದ ಕೃತ್ಯ ಸರಿ ಅಲ್ಲ, ಮಹಾರಾಷ್ಟ್ರ ಸರ್ಕಾರ ಇದನ್ನ ಖಂಡಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.

ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್ಗೆ ಬೆಂಕಿ ವಿಚಾರವಾಗಿ ವಿಜಯಪುರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ಸರ್ಕಾರ ನಮ್ಮ ಬಸ್ ಗಳಿಗೆ ಬೆಂಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮಹಾರಾಷ್ಟ್ರ ಬಸ್ಗಳು ನಮ್ಮ ಕರ್ನಾಟಕಕ್ಕು ಬರುತ್ತವೆ, ಮಹಾರಾಷ್ಟ್ರ ಬಸ್ ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಕ್ಕೂ ಹೋಗುತ್ತೆ.. ಅಲ್ವಾ… ಎಂದು ವಾರ್ನಿಂಗ್ ನೀಡಿದರು.

ಇನ್ನು ನಮಗು ಅವರಿಗು ಜಗಳ ಇಲ್ಲ. ಹೋರಾಟಕ್ಕು ನಮಗು ಸಂಬಂಧವೇ ಇಲ್ಲ, ಅದು ಅವರ ಆಂತರಿಕ ವಿಚಾರ ಅವರ ಆಂತರಿಕ ವಿಚಾರಕ್ಕು ಕರ್ನಾಟಕ ಬಸ್ ಗೆ ಬೆಂಕಿ ಹಾಕೋದಕ್ಕು ಸಂಬಂಧವೇ ಇಲ್ಲಾ ಹೋರಾಟ ಮಾಡೋರು ಅದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಉಚಿತ ಬಸ್ ಯೋಜನೆಯಿಂದಾಗಿ ಬಸ್ ಗದ್ದಲ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಉಚಿತ ಬಸ್ ಯೋಜನೆಗೆ ಇದು ಸಂಬಂಧವಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯವರು ಒಂದು ಹೊಸ ಬಸ್ ಖರೀದಿ ಮಾಡಿಲ್ಲ. ಕೊನೆ ವರ್ಷದಲ್ಲಿ ಹೊಸ ಬಸ್ ಖರೀದಿಗೆ ಅವರು ತೀರ್ಮಾನ ಮಾಡಿದ್ದರು ಆದರೆ ತೀರ್ಮಾನ ತಗೊಂಡಿದ್ದು, ಕಾರ್ಯಗತ ಆಗೋದು ತಡವಾಗಿದೆ ಈಗ ಬಸ್ ಬರ್ತೀವೆ ಎಂದರು.
ಇನ್ನು 13888ಜನ ನಿವೃತ್ತಿ ಹೊಂದಿದ್ದರು, ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರೋದು ಬಿಟ್ಟರೆ ಮತ್ತೆ ನೇಮಕಾತಿ ಆಗಿಲ್ಲ, ನಾಲ್ಕು ವರ್ಷಗಳಲ್ಲಿ ಬಿಜೆಪಿಯವರು ಏನು ಮಾಡಲಿಲ್ಲ. ಕೆರೊನಾ ಟೈಂ ನಲ್ಲಿ 3800ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದರು.

ಇನ್ನು ಹಳೆ ಬಸ್ ಗುಜರಿಗೆ ಹಾಕುತ್ತೇವೆ, ಹೊಸ ಬಸ್ ಬಂದಿಲ್ಲ. ಹೀಗಾಗಿ ಡ್ರೈವರ್ ಕೊರತೆ ಆಗುತ್ತೆ. ಈಗ 5500 ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಮೊನ್ನೆ 13800ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದೆ ಆದರೆ 8 ಸಾವಿರ ಬಸ್ ಖರೀದಿಗೆ ಅನುಮತಿ ಕೊಟ್ಟಿದ್ದಾರೆ. ಈಗ ಆ ಪ್ರಕ್ರಿಯೆ ಆರಂಭವಾಗಿದೆ. ನಾಲ್ಕೈದು ತಿಂಗಳಲ್ಲಿ ಹೊಸ ಬಸ್ ಬರುತ್ತವೆ. ಮತ್ತು ಎಂಟು ಸಾವಿರ ಸಿಬ್ಬಂದಿಗಳನ್ನು ಸಹ ನೇಮಕಾತಿ ಆಗುತ್ತೆ ಡ್ರೈವರ್ ಕೊರತೆನೂ ಹೋಗುತ್ತೆ ಹಾಗೂ ಕ್ಯಾನ್ಸಲ್ ಆಗಿದ್ದ ಶೆಡ್ಯೂಲ್ ಗಳನ್ನು ಆರಂಭಿಸುತ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಮೊದಲು ವಿಪಕ್ಷ ನಾಯಕ ಮಾಡಿಕೊಳ್ಳಲು ಹೇಳಿ, ಬಿಜೆಪಿ ಸೋತು ಸುಣ್ಣವಾಗಿ ಹೋಗಿದೆ ಎಂದು ಚಾಟಿಬೀಸಿದರು.

ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿ, ದುಬೈ ಇಲ್ಲ, ಯಾವ್ದು ಇಲ್ಲ ಸರ್ಕಾರ 10 ವರ್ಷ ಇರುತ್ತೆ ಎಂದರು.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಬದಲಾವಣೆ ಮಾಡುವ ಆ ಪ್ರಶ್ನೆಯೇ ಇಲ್ಲ, ಇದೆಲ್ಲ ಮಾಧ್ಯಮ ಸೃಷ್ಟಿ, ಮಾಧ್ಯಮದವರು ಕೇಳ್ತಾರೆ ಅಂತ ಅವರು ಏನೋ ಹೇಳ್ತಾರೆ ಎಂದರು.

ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬದಲಾವಣೆ ವಿಚಾರಕ್ಕೆ ಪಾಪ ಬಿಜೆಪಿಯವರು ಕನಸು ಕಾಣ್ತಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ, ಕಾರ್ಯಾಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಹೊರವಲಯ, ಅಲ್ಲಿ ಚಿರತೆ ಪ್ರತ್ಯಕ್ಷ ಆಗಿದೆ ಅಂತ ಮಾಧ್ಯಮಗಳಲ್ಲಿ ನೋಡಿದೆ. ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮಾಡುತ್ತಾರೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button