ಎ.ಟಿ.ಎಮ್ ನಲ್ಲಿ ದುಡ್ಡು ಇಲ್ಲದಿದ್ದರೆ ಇನ್ನು ಮುಂದೆ ಬ್ಯಾಂಕ್’ಗೆ ದಂಡ ವಿಧಿಸಲಿದೆ ಆರ್.ಬಿ.ಐ

ನವದೆಹಲಿ: ಬಹಳಷ್ಟು ಸಂದರ್ಭದಲ್ಲಿ ಎ.ಟಿ.ಎಮ್ ಗಳಲ್ಲಿ ದುಡ್ಡು ಇಲ್ಲದೆ ಗ್ರಾಹಕರು ಸಮಸ್ಯೆ ಅನುಭವಿಸುವುದಿದೆ. ಆದರೆ ಇದೀಗ ಎ.ಟಿ.ಎಮ್ ನಲ್ಲಿ ದುಡ್ಡು ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ ಹಾಕುವ ಮುಖಾಂತರ ಗ್ರಾಹಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಆರ್.ಬಿ.ಐ ಮುಂದಾಗಿದೆ.

ಅ. 1ರಿಂದ ಇದು ಜಾರಿಗೆ ಬರಲಿದೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು 10 ತಾಸುಗಳಿಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ನಗದು ಇಲ್ಲದೆ ಇದ್ದರೆ ಆ ಎಟಿಎಂ ಸ್ಥಾಪಿಸಿದ ಬ್ಯಾಂಕ್‌ಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ಆಯಾ ಎಟಿಎಂನ ಬ್ಯಾಂಕುಗಳು ಪಾವತಿಸಬೇಕಾಗುತ್ತದೆ.

ಈ ನಿಯಮ ವಿವಿಧ ಕಾರ್ಪೊರೇಟ್‌ ಸಂಸ್ಥೆಗಳ ಒಡೆತನದಲ್ಲಿರುವ ಎಟಿಎಂ ಗಳಿಗೂ ಅನ್ವಯವಾಗುತ್ತದೆ.

Latest Indian news

Popular Stories