45 ದಿನಗಳಲ್ಲಿ ಇಸ್ರೇಲ್ ಸೇನೆಯಿಂದ 70 ಮಂದಿ ಪತ್ರಕರ್ತರ ಹತ್ಯೆ!

ಹಮಾಸ್- ಇಸ್ರೆಲ್ ಸಂಘರ್ಷದ ಆರಂಭದಿಂದ ಈ ವರೆಗೂ ಕನಿಷ್ಟ 70 ಮಂದಿ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳು ಹತ್ಯೆಯಾಗಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ ಎಂದು ಪ್ಯಾಲೆಸ್ತೇನ್ ಪತ್ರಕರ್ತರ ಸಿಂಡಿಕೇಟ್ ನ ಡೇಟಾ ಹೇಳಿದೆ.

ಆರ್ ಎಸ್ ಎಫ್ (Reporters Without Borders) ನ ಮಾಹಿತಿಯ ಪ್ರಕಾರ ಗಾಜಾದಲ್ಲಿ ಪತ್ರಿಕೋದ್ಯಮವನ್ನು ನಿರ್ನಾಮ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.

ಕಳೆದ 3 ದಿನಗಳಲ್ಲಿ ಪ್ಯಾಲೆಸ್ತೇನ್ ನ 10 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅ.07 ರಿಂದ ನ.22 ವರೆಗೆ ಹತ್ಯೆಗೀಡಾದ ಮಾಧ್ಯಮದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ ಎಂದು ಆರ್ ಎಸ್ ಎಫ್ ಎಕ್ಸ್ ನಲ್ಲಿ ತಿಳಿಸಿದೆ.

ಆರ್‌ಎಸ್‌ಎಫ್‌ ನ ಮಧ್ಯಪ್ರಾಚ್ಯ ಡೆಸ್ಕ್‌ನ ಮುಖ್ಯಸ್ಥ ಜೊನಾಥನ್ ಡಾಘರ್ ಪ್ರಕಾರ, “ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿ 45 ದಿನಗಳಲ್ಲಿ ಸುಮಾರು 50 ಪತ್ರಕರ್ತರನ್ನು ಕೊಂದಿವೆ, ಕಾರ್ಯನಿರತರಾಗಿದ್ದಾಗ 11 ಮಂದಿ ಸಾವನ್ನಪ್ಪಿದ್ದಾರೆ. ಇದು ಶತಮಾನದಲ್ಲೇ ಅತ್ಯಂತ ಭೀಕರ ಹತ್ಯೆಗಳಲ್ಲಿ ಒಂದಾಗಿದೆ. ಅಂತರಾಷ್ಟ್ರೀಯ ಪತ್ರಕರ್ತರು ಗಾಜಾಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ವರದಿಗಾರರಿಗೆ ಸುರಕ್ಷಿತ ಆಶ್ರಯವಿಲ್ಲ. ಒಬ್ಬರ ನಂತರ ಒಬ್ಬರು ಕೊಲ್ಲಲ್ಪಡುತ್ತಿದ್ದಾರೆ. ಅಕ್ಟೋಬರ್ 7 ರಿಂದ, ಪ್ಯಾಲೇಸ್ಟಿನಿಯನ್ ಪ್ರದೇಶವು ಪತ್ರಿಕೋದ್ಯಮದ ನಿಜವಾದ ನಿರ್ಮೂಲನೆಗೆ ಒಳಪಟ್ಟಿದೆ.

“ಅಲ್ಲಿನ ಪತ್ರಕರ್ತರನ್ನು ರಕ್ಷಿಸಲು, ರಫಾ ಗಡಿ ದಾಟುವಿಕೆಯನ್ನು ತೆರೆಯಲು ಮತ್ತು ಅಂತರರಾಷ್ಟ್ರೀಯ ವರದಿಗಾರರು ಒಳಗೆ ಹೋಗಲು ಮಧ್ಯಪ್ರವೇಶಿಸುವಂತೆ ನಾವು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.

Latest Indian news

Popular Stories