Featured Story

ರೆಟ್ರೊ ತೆರಿಗೆ ರದ್ದು; ತೆರಿಗೆ ನೀತಿ ತಿದ್ದುಪಡಿ – ವಿದೇಶಿ ಬಂಡವಾಳದ ಮೇಲೆ ಕಣ್ಣು!

ನವದೆಹಲಿ: ವೊಡಾಫೋನ್ ಮತ್ತು ಕೈರ್ನ್ ಸೇರಿದಂತೆ 15 ಸಂಸ್ಥೆಗಳಿಗೆ ಸಹಾಯವಾಗುವಂತೆ ಈ ಹಿಂದಿನ ವಿವಾದಾತ್ಮಕ ತೆರಿಗೆ ಕಾಯಿದೆ-2012 ನ್ನು ರದ್ದುಗೊಳಿಸಿದೆ. ಇದನ್ನು ಬೃಹತ್ ತೆರಿಗೆ ಸುಧಾರಣಾ ಕ್ರಮವೆಂದು ಬಿಂಬಿಸಲಾಗುತ್ತಿದ್ದು ಇದರಿಂದಾಗಿ ವಿದೇಶಿ ಹೂಡಿಕೆದಾರರಿಗೆ ಭರವಸೆ ಸಿಗುವ ನಿರೀಕ್ಷೆಯಿದೆ.

ಇಂದು ಪಾರ್ಲಿಮೆಂಟ್ ನಲ್ಲಿ ಅನುಮೋದನೆಯಾಗಿರುವ ಮಸೂದೆಯಿಂದಾಗಿ ಕ್ರೈನ್, ವೊಡಾಫೋನ್ ಮತ್ತು ಇತರ ಕಂಪೆನಿಗಳು ಸರಕಾರಕ್ಕೆ ಪಾವತಿಸಿದ ತರಿಗೆ ಹಣವನ್ನು ಬಡ್ಡಿರಹಿತವಾಗಿ ವಾಪಸು ಪಡೆಯಲಿದೆ. ಆದರೆ ಸರಕಾರದ ವಿರುದ್ಧದ ದಾವೆಯನ್ನು ಹಿಂಪಡೆಯಬೇಕು ಮತ್ತು ಯಾವುದೇ ರೀತಿಯ ಪರಿಹಾರ ಕೇಳುವಂತಿಲ್ಲವೆಂದು ಷರತ್ತು ವಿಧಿಸಿದೆ.

ಈ ರೆಟ್ರೊ ತೆರಿಗೆ ನೀತಿ ರದ್ದುಗೊಂಡ ನಂತರ ಸರಕಾರ 8100 ಕೋಟಿಯನ್ನು ಕಂಪೆನಿಗಳಿಗೆ ಹಿಂತಿರುಗಿಸಬೇಕಾಗಿದೆ. ಇದರಲ್ಲಿ 7900 ಕೋಟಿ ಕ್ರೈನಿ ಎನರ್ಜಿ ಸಂಸ್ಥೆಗೆ ದಕ್ಕುತ್ತದೆ. ವಿದೇಶಿ ಬಂಡವಾಳ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಹಣಕಾಸು ಸಚಿವೆ ಸೀತಾರಾಮನ್ ತಿಳಿಸಿದ್ದಾರೆ. ಅದರೊಂದಿಗೆ ವಿದೇಶಿ ಸಂಸ್ಥೆಗಳು ಬಹಳಷ್ಟು ಸಮಯದಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ತಪ್ಪಿಸಿ ಮುಜುಗರದಿಂದ ಸರಕಾರ ದೂರ ಉಳಿಯಲು ಈ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button