ರೇವಂತ್ ರೆಡ್ಡಿ ಮನೆಯ ಮುಂದೆ ಸಂಭ್ರಮಾಚರಣೆ

ಬಹುನಿರೀಕ್ಷಿತ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. 119 ಸ್ಥಾನಗಳಲ್ಲಿ ಕಾಂಗ್ರೆಸ್ 60ರಲ್ಲಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ ದಾಟಿ ದಾಪುಗಾಲು ಹಾಕುತ್ತಿದೆ. 119 ಸದಸ್ಯ ಬಲದ ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳು ಅಗತ್ಯವಾಗಿವೆ.

ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದ್ದವು. ಆರಂಭಿಕ ಮುನ್ನಡೆಯಲ್ಲಿ ಇದೇ ಚಿತ್ರಣ ಕಾಣಿಸುತ್ತಿದೆ.

119 ರ ಸದ್ಯಸ ಬಲ ಇರುವ ತೆಲಂಗಾಣದಲ್ಲಿ 11: 15 ನಿಮಿಷದ ಹೊತ್ತಿಗೆ 67 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯನ್ನು ಸಾಧಿಸಿದ್ದು ,ಕಾರ್ಯಕರ್ತರಲ್ಲಿ ಸಂತೋಷ ಮನೆಮಾಡಿದೆ,ಅದೇ ರೀತಿ ಈ ಸಂಖ್ಯೆ ಇನ್ನು ಕೂಡ ಹೆಚ್ಚಬಹುದು ಎಂಬುವುದು ರಾಜಕೀಯ ಧುರೀಣರ ಅಭಿಪ್ರಾಯ ಈ ಹಿನ್ನಲೆ
ತೆಲಂಗಾಣ ಕಾಂಗ್ರೆಸ್ ನ ಮುಖ್ಯಸ್ಥ ರೇವಂತ್ ರೆಡ್ಡಿ ಮನೆಯ ಮುಂದು ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ

Latest Indian news

Popular Stories