ಹಸಿರು ಪರಿಸರ ನಿಧಿಗೆ 2 ಬಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್!

ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹಸಿರು ಪರಿಸರ ನಿಧಿಗೆ 2 ಬಿಲಿಯನ್ ಡಾಲರ್ ಒದಗಿಸುವುದಾಗಿ ತಿಳಿಸಿದ್ದಾರೆ. ಇದು ಹವಾಮಾನ ಬದಲಾವಣೆ ನಿಭಾಯಿಸಲು ವಿಶ್ವಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ದೇಶವೊಂದು ನೀಡಿದ ಅತಿದೊಡ್ಡ ಆರ್ಥಿಕ ನೆರವಾಗಿದೆ. 

ಹಸಿರು ಪರಿಸರ ನಿಧಿ ಜಾಗತಿಕ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಸಮುದಾಯಗಳಿಗೆ ಸಹಾಯ ಮಾಡಲು ಅಭಿವೃದ್ಧಿ ಶೀಲ ರಾಷ್ಟ್ರಗಳನ್ನು ಬೆಂಬಲಿಸಲು ಮೀಸಲಾಗಿರುವ ಅತಿದೊಡ್ಡ ಜಾಗತಿಕ ನಿಧಿಯಾಗಿದೆ.

ಕೋಪನ್ ಹೇಗನ್ ಒಪ್ಪಂದದ ನಂತರ 194 ದೇಶಗಳು ಈ ನಿಧಿಯನ್ನು ಸ್ಥಾಪಿಸಿದ್ದು, ತಮ್ಮ ದೇಶಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆ ಪರಿಣಾಮಗಳನ್ನು ಎದುರಿಸಲು ದುರ್ಬಲ ಆರ್ಥಿಕತೆಗಳನ್ನು ಬೆಂಬಲಿಸಲು ಒಟ್ಟಾಗಿ ಕೆಲಸ ಮಾಡಲು ಜಿ-20 ನಾಯಕರಿಗೆ ರಿಷಿ ಸುನಕ್ ಕರೆ ನೀಡಿದ್ದಾರೆ.

Latest Indian news

Popular Stories