ನಾಪೋಕ್ಲು -ಮೂರ್ನಾಡು ರಸ್ತೆಯಲ್ಲಿ ಭೀಕರ ಅಪಘಾತ | ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತ್ಯು

ದ್ವಿಚಕ್ರ ವಾಹನ ಮತ್ತು ಆಲ್ಟೊ ಕಾರಿನ ನಡುವೆ ಭೀಕರ ಅಪಘಾತ ನಡೆದು ಯುವಕನೊರ್ವ ಮೃತಪಟ್ಟಿದ್ದಾನೆ.

ನಾಪೋಕ್ಲು – ಮೂರ್ನಾಡು ಮುಖ್ಯರಸ್ತೆಯ ಹೊದವಾಡ ಗ್ರಾಮದ ತಿರುವಿನಲ್ಲಿ ನಡೆದಿರುವ ದುರ್ಘಟನೆಯಲ್ಲಿ ನಾಪೋಕ್ಲುವಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಪ್ಪಾಜಿ 19 (ನವೀನ )ಮೃತ ಪಟ್ಟಿದ್ದಾರೆ.

ಮೂರ್ನಾಡು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಮತ್ತು ಮೂರ್ನಾಡು ಕಡೆಯಿಂದ ನಾಪೋಕ್ಲುವಿಗೆ ಬರುತ್ತಿದ್ದ ಆಲ್ಟೊ ಕಾರಿನ ನಡುವೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿದ್ದ ಇನ್ನೊಬ್ಬ ಸಹಪ್ರಯಾಣಿಕನಿಗೆ ಗಂಭೀರ ಗಾಯ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ನಾಫೋಕ್ಲು ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

Latest Indian news

Popular Stories