ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ: ಶೂಟರ್‌ಗಳಿಗೆ ನೀಡಲಾಗಿತ್ತು ₹ 4 ಲಕ್ಷ ಸುಪಾರಿ !

ಮುಂಬೈ: (ದಿ ಹಿಂದುಸ್ತಾನ್ ಗಝೆಟ್)

ಸಲ್ಮಾನ್ ಖಾನ್ ಮನೆಯ ಮೇಲಿನ ಫೈರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಶಂಕಿತನನ್ನು ಬುಧವಾರ ರಾತ್ರಿ ಹರಿಯಾಣದಿಂದ ಬಂಧಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಈ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ಶೂಟರ್‌ಗಳ ನಡುವೆ ಸಂಪರ್ಕಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಈಗಾಗಲೇ ವಿಕ್ಕಿ ಗುಪ್ತಾ, 24, ಮತ್ತು ಸಾಗರ್ ಕುಮಾರ್ ಪಾಲಕ್, 21 ಪೊಲೀಸ್ ಕಸ್ಟಡಿಯಲ್ಲಿ ಇದ್ದು ಅವರ ವಿಚಾರಣೆ ನಡೆಯುತ್ತಿದೆ.

ಭಾನುವಾರ ಮುಂಜಾನೆ 4:55 ಕ್ಕೆ, ನಟ ವಾಸವಾಗಿರುವ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಐದು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.

ಇಬ್ಬರು ಶಂಕಿತರ ಪೈಕಿ ಒಬ್ಬನಾದ ಸಾಗರ್ ಕುಮಾರ್ ಪಾಲಕ್ ಎಂಬಾತನಿಗೆ ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು ಬಂದೂಕು ನೀಡಲಾಗಿತ್ತು ಎಂದು ಹೇಳಲಾಗಿದ್ದು, ಏಪ್ರಿಲ್ 13ರ ರಾತ್ರಿ ಬಾಂದ್ರಾ ಪ್ರದೇಶದಿಂದ ಬಂದಿದ್ದು, ಆಯುಧ ಪೂರೈಸಿದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳು ಬಿಹಾರದ ಪಶ್ಚಿಮ ಚಂಪಾರಣ್‌ನವರಾಗಿದ್ದು, ಸೋಮವಾರ ತಡರಾತ್ರಿ ಗುಜರಾತ್‌ನ ಕಚ್ ಜಿಲ್ಲೆಯ ದೇವಸ್ಥಾನದ ಆವರಣದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಪಾಲಕ್ ಮತ್ತು ಅವನ ಸಹಚರ ವಿಕ್ಕಿ ಗುಪ್ತಾ ಇಬ್ಬರಿಗೂ ಕೃತ್ಯ ನಡೆಸಲು ₹ 4 ಲಕ್ಷ ನೀಡಲಾಯಿತು. ಆರಂಭಿಕ ಪಾವತಿ ₹ 1 ಲಕ್ಷ ಮುಂಗಡವಾಗಿ ನೀಡಲಾಗಿತ್ತು. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಹೇಳಿದಂತೆ ಉದ್ದೇಶಿತ ಕೃತ್ಯದ ಹಿಂದಿನ ಉದ್ದೇಶ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ಅಲ್ಲ ಬದಲಾಗಿ ಅವರನ್ನು ಹೆದರಿಸುವುದಾಗಿತ್ತು ಎನ್ನಲಾಗಿದೆ.

ಇದನ್ನು ಓದಿ

“ಲಾರೆನ್ಸ್ ಬಿಷ್ಣೋಯ್’ನನ್ನು ಮುಗಿಸುತ್ತೇನೆ”: ಸಲ್ಮಾನ್ ಖಾನ್ ಭೇಟಿಯಾದ ನಂತರ ಏಕನಾಥ್ ಶಿಂಧೆ

Latest Indian news

Popular Stories