
Featured StoryMadikeri
ಮಾಜಿ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣ | ಐವರ ಮೇಲೆ ಮೊಕದ್ದಮೆ
ಮಡಿಕೇರಿಯ ಮಾಜಿ ಯೋಧ ಸಂದೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟಿನಲ್ಲಿ ನಮೂದಿಸಿದ ವ್ಯಕ್ತಿಗಳಾದ ಪ್ರಕರಣದ ಕೇಂದ್ರ ಬಿಂದು ಜೀವಿತ ಎಂಬ ಮಹಿಳೆ ಮೇಲೆ ಎಫ್ ವೈ ಆರ್ ಸಂಖ್ಯೆ 112 /23 ಅನ್ವಯ ಮೊಕದಮೆ ದಾಖಲು ಮಾಡಿಕೊಳ್ಳಲಾಗಿತ್ತು.
ಡೆತ್ ನೋಟ್ ನಲ್ಲಿ ನಮೂದಿಸಲಾದ ಇತರ ನಾಲ್ವರಾದ ಜೀವಿತಳ ತಂಗಿ, ಅವಳ ತಾಯಿ, ಇಬ್ಬನಿ ಸ್ಪ್ರಿಂಗ್ ರಿಸಾರ್ಟ್ ಮಾಲಿಕ ಸತ್ಯ, ಪೊಲೀಸ್ ಸತೀಶ್ ಹಾಗೂ ಇಬ್ಬರು ಇತರರನ್ನು ಸೇರ್ಪಡೆಗೊಳಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 306,384, ರೆಡ್ ವಿತ್ 34. IPC ಅಡಿಯಲ್ಲಿ ಮೊಕದಮ್ಮೆ ದಾಖಲಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳು ಇದೀಗ ತಲೆಮರಿಸಿಕೊಂಡಿದ್ದು ಪೊಲೀಸರು ಪ್ರತ್ಯೇಕ ತಂಡವನ್ನು ರಚಿಸಿ ಇವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.




