ಸಂಘಪರಿವಾರದ ಕಾರ್ಯಕರ್ತನಿಂದ ಪ್ರಕಾಶ್‌ ರಾಜ್‌ ಗೆ ಕೊಲೆ ಬೆದರಿಕೆ – ವೀಡಿಯೋ ವೈರಲ್

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರಿಗೆ ಸಂಘಪರಿವಾರದ ಕಾರ್ಯಕರ್ತನೋರ್ವ ಜೀವ ಬೆದರಿಕೆ ಹಾಕಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಹರಿದಾಡುತ್ತಿದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಂಘಪರಿವಾರದ ಕಾರ್ಯಕರ್ತ ಸಂತೋಷ್‌ ಕಾರ್ತಾಳ್‌ ಎಂಬಾತ, ಧರ್ಮಾಧಿಕಾರಿಗಳ ಕ್ಷಮೆ ಕೇಳದಿದ್ದರೆ 24 ಗಂಟೆಯೊಳಗಡೆ ನಿನ್ನ ಮನೆ ಮುಂದೆ ನಿನ್ನ ಹೆಣ ಬಿದ್ದಿರುತ್ತದೆʼʼ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಈ ವೀಡಿಯೊವನ್ನು ಆತ ತನ್ನ ಫೇಸ್‌ ಬುಕ್‌ ನಲ್ಲಿ ಹರಿಬಿಟ್ಟಿದ್ದಾನೆ.

ಈ ಬಗ್ಗೆ ಪ್ರಕಾಶ್‌ ರಾಜ್‌ ತಮ್ಮ ಟ್ವಟರ್‌ ನಲ್ಲಿ, ʼʼನೊಡ್ರಪಾ.. ಉತ್ತರ ಕುಮಾರರು .. ಕೊಲೆ ಬೆದರಿಕೆ ಹಾಕ್ತಾ ಇದ್ದಾರೆ .. ಏನ್ ಮಾಡಾಣ ವಸಿ ಯೋಳಿʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಟ್ಯಾಗ್‌ ಮಾಡಿದ್ದಾರೆ.

Latest Indian news

Popular Stories