
Featured StoryUdupi
ಸಂತೆಕಟ್ಟೆಯಲ್ಲಿ ಬೆಂಕಿ ಆಕಸ್ಮಿಕ – ಲಕ್ಷಾಂತರ ಮೌಲ್ಯದ ಸೊತ್ತು ಹಾನಿ
ಉಡುಪಿ: ಸಂತೆಕಟ್ಟೆಯಲ್ಲಿ ಮಂಗಳವಾರ ಸಂಜೆ ಅಕಸ್ಮಿಕವಾಗಿ ಬೆಂಕಿ ಉಂಟಾಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿ ಉಂಟಾದ ಘಟನೆ ನಡೆದಿದೆ.
ವಾರಾಹಿ ಪ್ಯೆಪ್ ಹಾಕಿರುವ ಗೋಡೌನ್ ಗೆ ಏಕಾಏಕಿ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ವ್ಯಾಪಿಸಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ.
ಮೂರು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಸಹಕರಿಸುತ್ತಿವೆ. ಸುತ್ತಮುತ್ತಲು ಬೆಂಕಿ ಹರಡದಂತೆ ಎಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




