ಲೈವ್ ಸ್ಟ್ರೀಮಿಂಗ್ ವೇಳೆಯೇ ಹಾಂಗ್‌ ಕಾಂಗ್‌ನಲ್ಲಿ ಭಾರತ ಮೂಲದ ಅಮಿತ್ ಎಂಬ ವ್ಯಕ್ತಿಯಿಂದ ಯುಟ್ಯೂಬರ್ ಯುವತಿಗೆ ಲೈಂಗಿಕ ಕಿರುಕುಳ

ನವದೆಹಲಿ: ಲೈವ್ ಸ್ಟ್ರೀಮಿಂಗ್ ಮಾಡುವಾಗಲೇ ಭಾರತ ಮೂಲದ ವ್ಯಕ್ತಿಯಿಂದ ಯುಟ್ಯೂಬರ್ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹಾಂಗ್‌ ಕಾಂಗ್‌ನಲ್ಲಿ ನಡೆದಿದೆ.

ಹಾಂಗ್‌ ಕಾಂಗ್‌ನಲ್ಲಿ ಕೊರಿಯನ್ ಮಹಿಳಾ ವಿಡಿಯೊ ಸ್ಟ್ರೀಮರ್‌ (ಯುಟ್ಯೂಬರ್) ಒಬ್ಬರಿಗೆ ಭಾರತೀಯ ಮೂಲದನು ಎನ್ನಲಾದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ವರದಿಯಾಗಿದೆ. ಯುವತಿಗೆ ಕಿರುಕುಳ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವಿಡಿಯೋದಲ್ಲಿ ದಕ್ಷಿಣ ಕೊರಿಯಾ ಮೂಲದ ಯುವತಿ ಹಾಂಗ್‌ ಕಾಂಗ್‌ನ ಸಬ್‌ವೇ ಮೆಟ್ರೊ ನಿಲ್ದಾಣದ ಬಳಿ, ಆ ಸ್ಥಳದ ಬಗ್ಗೆ ವಿಡಿಯೊ ಮೂಲಕ ಮಾಹಿತಿ ನೀಡುತ್ತಿರುತ್ತಾರೆ.

ಆ ವೇಳೆ ಅಲ್ಲಿಗೆ ಬಂದ ವ್ಯಕ್ತಿ, ಯುವತಿಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದು ಲೈವ್ ವಿಡಿಯೊದಲ್ಲಿ ಕಂಡು ಬಂದಿದೆ. ಯುವತಿ ಆತನಿಂದ ತಪ್ಪಿಸಿಕೊಂಡು ಮುಂದೆ ಹೋದರೂ ಆತ ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿ ವಿಕೃತಿ ಮೆರೆಯುತ್ತಾನೆ. ಈ ವೇಳೆ ಯುವತಿ ಸಹಾಯಕ್ಕಾಗಿ ದಾರಿಹೋಕರನ್ನು ಕೇಳಿದ್ದು, ಈ ವೇಳೆ ವ್ಯಕ್ತಿಯೋರ್ವ ಆಕೆ ನೆರವಿಗೆ ಧಾವಿಸುತ್ತಲೇ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅಲ್ಲಿಂದ ಪರಾರಿಯಾಗುತ್ತಾನೆ.

ವಿಡಿಯೋ ವೈರಲ್ ಆಗುತ್ತಲೇ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು freepressjournal ವೆಬ್‌ಸೈಟ್ ವರದಿ ಮಾಡಿದ್ದು, ವರದಿಯಲ್ಲಿ ದೌರ್ಜನ್ಯ ಎಸಗಿದವನನ್ನು ಅಮಿತ್ ಎಂದು ಗುರುತಿಸಲಾಗಿದ್ದು, ಹಾಂಗ್‌ ಕಾಂಗ್‌ನಲ್ಲಿರುವ ರಾಜಸ್ತಾನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದೆ.
 

Latest Indian news

Popular Stories