
Featured StoryUttara Kannada
ಶಿರೂರು ಗುಡ್ಡ ಕುಸಿತ ಪ್ರಕರಣ: ಕಾಣೆಯಾಗಿದ್ದ ಸಣ್ಣಿ ಗೌಡ ,ಶವ ಪತ್ತೆ
ಕಾರವಾರ: ಶಿರೂರು ರಾಷ್ಟ್ರೀಯ ಹೆದ್ದಾರಿ ಗುಡ್ಡ ಕುಸಿತ ಪ್ರಕರಣದಲ್ಲಿ ಕಾಣೆಯಾಗಿದ್ದ ಸಣ್ಣಿ ಹನುಮಂತ ಗೌಡ ಅವರ ಶವ ಪತ್ತೆ ಗಂಗೇಕೊಳ್ಳದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಗಂಗಾವಳಿ ನದಿಯ ಮುಖಭಾಗದಲ್ಲಿ ಶವ ಸಿಕ್ಕಿದೆ. ಎಸ್ ಡಿಆರ್ ಎಫ್ ನವರು ಮಹಿಳೆಯ ಶವ ಹೊರತೆಗೆದಿದ್ದಾರೆ. ಜು.೧೬ ರಂದು ದುರ್ಘಟನೆ ನಡೆದಿತ್ತು. ಸಣ್ಣಿ ಗೌಡ ಗಂಗಾವಳಿ ನದಿ ದಂಡೆಯ ಉಳುವರೆ ಗ್ರಾಮದವರು. ಅವರ ಮನೆ ಸಹಿತ ನದಿ ನೀರಲ್ಲಿ ಸಣ್ಣಿ ಗೌಡ ಕೊಚ್ಚಿ ಹೋಗಿದ್ದರು. ಅವರ ಮಗ ಮಂಜುನಾಥ ಗೌಡ ಕಳೆದ ಎಂಟು ದಿನಗಳಿಂದ ತಾಯಿಗಾಗಿ ಕಾಯುತ್ತಿದ್ದ. ಇನ್ನೊಂದೆಡೆ ಇಂದು ಬೆಳಗಿನಿಂದ ಭೂಸೈನ್ಯ ನದಿಯಲ್ಲಿ ಬಿದ್ದ ಮಣ್ಣು ಕಲ್ಲಿನಡಿ ಲಾರಿ ಹಾಗೂ ಚಾಲಕ ಅರ್ಜುನ್ ಗಾಗಿ ಹುಡುಕಾಟ ಆರಂಭಿಸಿದೆ.





