ಕಾರು ಮತ್ತು ಖಾಸಗಿ ಬಸ್ (Private Bus) ಡಿಕ್ಕಿಯಾಗಿದ್ದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಕ್ರೆಬೈಲು ಸಮೀಪ ಘಟನೆ ಸಂಭವಿಸಿದೆ.

ಕಾರು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿತ್ತು ಎಂದು ಹೇಳಲಾಗುತ್ತಿದೆ. ಬಸ್ಸು ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಸಾಗುತ್ತಿತ್ತು. ಕಾರಿನಲ್ಲಿದ್ದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿ ಮತ್ತು ಗಾಯಾಳುಗಳ ಗುರುತು ಇನ್ನಷ್ಟೆ ತಿಳಿದು ಬರಬೇಕಿದೆ.

ನುಜ್ಜುಗುಜ್ಜಾದ ಕಾರು
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಜು ಪುಡಿಯಾಗಿದೆ. ಇಂಜಿನ್ ಹೊರತು ಕಾರಿನ ಬಾನೆಟ್ ಸೇರಿದಂತೆ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಕಾರಿನ ಗುರುತು ಸಿಗದಂತಾಗಿದೆ.
ಇನ್ನು, ಬಸ್ಸಿನ ಮುಂಭಾಗಕ್ಕೂ ಹಾನಿಯಾಗಿದೆ. ಬಸ್ಸಿನ ಗಾಜು ಪುಡಿಯಾಗಿದೆ. ಅಪಘಾತದ ರಭಸಕ್ಕೆ ಕಾರು ರಸ್ತೆಯಿಂದ ಹೊರಗೆ ಹೋಗಿ ತಿರುಗಿ ನಿಂತಿದೆ. ಬಸ್ಸು (Private Bus) ರಸ್ತೆ ಅಡ್ಡಲಾಗಿ ಮತ್ತೊಂದು ಬದಿಗೆ ಮುಖಮಾಡಿ ನಿಂತಿದೆ.