ಕೋಮುವಾದಿ ಶಕ್ತಿಗಳು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು – ಸಿದ್ದರಾಮಯ್ಯ ಗುಡುಗು

ಬೆಂಗಳೂರು: ಸದನದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿ.ಕೆ ಶಿವಕುಮಾರ್‌ (DK Shivakumar) ಬಂದಾಗ ಖಾಲಿ ಕುರ್ಚಿಗಳಿದ್ದವು. ಇದನ್ನ ನೋಡಿ ಸಿದ್ದರಾಮಯ್ಯ ಬಿಜೆಪಿಯವರು (BJP) ವಿಪಕ್ಷ ಸ್ಥಾನದಲ್ಲೇ ಕೂರಬೇಕೆಂದು ಗುಡುಗಿದ್ದಾರೆ. ನನ್ನ ಎದುರು ಒಬ್ಬ ಸದಸ್ಯರು ಇಲ್ಲ. ಖಾಲಿ ಕುರ್ಚಿಗಳಿಗೆ (Empty Chair) ಉತ್ತರ ಕೊಡ್ತಿರೋದು ಬಹಳ ದುಃಖದ ಸಂಗತಿ. ವಿಪಕ್ಷ ನಾಯಕನ (Opposition Leader) ಆಯ್ಕೆ ಮಾಡಿಲ್ಲ. ಒಂದು ಪಕ್ಷ ಇಷ್ಟು ರಾಜಕೀಯ ದಿವಾಳಿಯಾಗಿರೋದು ಪ್ರಜಾಪ್ರಭುತ್ವಕ್ಕೆ (Democracy) ನಿಜವಾಗಿಯೂ ಮಾರಕ ಅಂತ ಕಿಡಿಕಾರಿದರು.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಸಿಎಂ ಕಿಡಿಕಾರಿದ್ದಾರೆ. ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡ್ತಿವಿ ಅಂತಾ ಪ್ರಧಾನಿ ಹೇಳಿದರು. ಆದರೆ ನಾವು ಬಿಜೆಪಿ ಮುಕ್ತ ಭಾರತ ಮತ್ತೆ ಬಿಜೆಪಿ ಮುಕ್ತ ಕರ್ನಾಟಕ ಅಂತಾ ಹೇಳೋಕೆ ಹೋಗಲ್ಲ ಎಂದಿದ್ದೆ. ಆದರೆ ಕೋಮುವಾದಿ ಶಕ್ತಿಗಳು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಅವರು ಯಾವಾಗಲೂ ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಇರಬೇಕು ಅನ್ನೋದು ನಮ್ಮ ಆಶಯ. ಮೋದಿ ಹೋದ ಕಡೆಗಳೆಲ್ಲ ನಾವು ಗೆದ್ದಿದ್ದೇವೆ ಅಂತಾ ವಾಗ್ದಾಳಿ ನಡೆಸಿದರು.

ಕೆಲವರು ನನ್ನ ಬಜೆಟ್ ಟೀಕೆ ಮಾಡಿದ್ದಾರೆ. ಕೆಲವರು ಸ್ವಾಗತ ಮಾಡಿದ್ದಾರೆ, ಇಬ್ಬರ ಮಾತನ್ನು ನಾನು ಸ್ವಾಗತ ಮಾಡುತ್ತೇನೆ. ಹೊಸ ಸದಸ್ಯರು ಬಜೆಟ್ ಚರ್ಚೆ ಯಲ್ಲಿ ಭಾಗವಹಿಸಿ ಅನೇಕ ಸಲಹೆ ನೀಡಿದ್ದಾರೆ. ಯಾರು ಯಾರು ಭಾಗವಹಿಸಿದವರಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಾನು 14 ಬಜೆಟ್ ಮಂಡಿಸಿದ್ದೇನೆ, ನಾನು ಮೊದಲ ಬಾರಿಗೆ ವಿಪಕ್ಷ ಗಳು ಇಲ್ಲದೇ ಉತ್ತರ ಕೊಡುವ ಪರಿಸ್ಥಿತಿ ಬಂದಿದೆ.

ನನ್ನ ಎದುರು ಗಡೆ ಒಬ್ಬ ಸದಸ್ಯರು ಇಲ್ಲೇ ಖಾಲಿ ಕುರ್ಚಿಗಳಿಗೆ ನಾನು ಉತ್ತರ ಕೊಡ್ತಿರೋದು ಬಹಳ ದುಃಖದ ಸಂಗತಿ. ವಿಧಾನಸಭೆ ಯಲ್ಲಿ ವಿಪಕ್ಷ ನಾಯಕ ನಿಲ್ಲದೇ, ಬಜೆಟ್ ಹಾಗೂ ರಾಜ್ಯಪಾಲರ ಮೇಲೆ ಚರ್ಚೆ ನಡೆದಿರೋದು ಇದೇ ಮೊದಲು. ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತಿಗೂ ಇದನ್ನು ನೋಡಿಲ್ಲ ಎಂದು ಹೇಳಿದರು.

ಕೇಂದ್ರದಲ್ಲಿ ಅಧಿಕಾರ ಇರುವಂತ ಪಕ್ಷ, ಇಲ್ಲಿ ಹಲವು ಬಾರಿ ಅಧಿಕಾರ ನಡೆಸಿದಂತವರು. ಆದರೆ ವಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳದೇ ಇರೋದು, ಒಂದು ಪಕ್ಷ ಎಷ್ಟು ರಾಜಕೀಯ ದಿವಾಳಿಯಾಗಿದೆ ಅಂದರೆ ಪ್ರಜಾಪ್ರಭುತ್ವಕ್ಕೆ ನಿಜವಾಗಿಯೂ ಮಾರಕ. ಗಲಾಟೆ, ಗೊಂದಲ, ಪ್ರತಿಭಟನೆ ಯಲ್ಲಿ ಬಿಜೆಪಿ ಯವರು, ಕಾಲ ಹರಣ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು, ಆದರೆ ವಿರೋಧಕ್ಕೆ ವಿರೋಧ ಮಾಡೋದು ಸರಿಯಲ್ಲ.

ಕಾಂಗ್ರೆಸ್ ಪಕ್ಷದಿಂದ 32 ಸದಸ್ಯರು ಭಾಗವಹಿಸಿದ್ದಾರೆ ಚರ್ಚೆಯಲ್ಲಿ, ಅಧಿಕೃತ ವಿರೋಧ ಪಕ್ಷದ ಬಿಜೆಪಿ ಯಲ್ಲಿ 20 ಜನ ಮಾತ್ರ ಮಾತಾಡಿದ್ದಾರೆ. ಜೆಎಡಿಎಸ್ ನಲ್ಲಿ 7 ಜನ ಮಾತ್ರ ಮಾತಾಡಿದ್ದಾರೆ. ಪಕ್ಷೇತರರು 3 ಸದಸ್ಯರು ಮಾತಾಡಿದ್ದಾರೆ. ರಾಜ್ಯದ ಆಗು ಹೋಗುಗಳ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ಟೀಕೆ ಮಾಡಿದರು.

ಅವರಿಗೆ ಕರ್ತವ್ಯಕ್ಕಿಂತ ರಾಜಕೀಯನೇ ಜಾಸ್ತಿ, ಅವರು ರಾಜಕೀಯ ಮಾಡಲಿ, ಅವರು ಎಷ್ಟು ರಾಜಕೀಯ ಮಾಡಿದರು ನಾವು ಹೆದರುವುದಿಲ್ಲ. ಅವರಿಗೆ ಹೊಟ್ಟೆ ಉರಿ ಶುರುವಾಗಿರೋದು ನಮ್ ಗ್ಯಾರಂಟಿ ಗಳಿಂದ. ಭಾರತವನ್ನು ಕಾಂಗ್ರೆಸ್ ಮುಕ್ತ ವಾಗಿ ಅಂತಾ ಪ್ರಧಾನಿಗಳು ಹೇಳಿದ್ದರು.

ಆದರೆ ನಾವು ಬಿಜೆಪಿ ಮುಕ್ತ ಭಾರತ ಮತ್ತೆ ಬಿಜೆಪಿ ಮುಕ್ತ ಕರ್ನಾಟಕ ಅಂತಾ ಹೇಳೋಕೆ ಹೋಗಲ್ಲ. ಆದರೆ ಅವರು ಕೋಮುವಾದಿ ಶಕ್ತಿಗಳು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಅವರು ಯಾವಾಗಲೂ ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಇರಬೇಕು ಅನ್ನೋದು ನಮ್ಮ ಆಶಯ. ಬಿಜೆಪಿ ಯವ ಅವನತಿ ಕರ್ನಾಟಕದಿಂದಲೇ ಶುರುವಾಗಿದೆ, ಬಿಜೆಪಿಯ ಅವನತಿ ಕಾಂಗ್ರೆಸ್ ನಿಂದಲೇ ಶುರುವಾಗಿದೆ ಎಂದು ಟೀಕಿಸಿದರು.

Latest Indian news

Popular Stories