ಗಾಂಧಿಯನ್ನು ಕೊಂದ ಗೋಡ್ಸೆಯ ವಂಶದವರು “ಮಹಾತ್ಮ ಗಾಂಧಿ” ಯ ಪ್ರತಿಮೆ ಮುಂದೆ ಕುಳಿತುಕೊಂಡಿದ್ದಾರೆ – ಬಿಜೆಪಿ ಶಾಸಕರಿಗೆ ಸಿದ್ದರಾಮಯ್ಯ ಟಾಂಗ್

ಬೆಂಗಳೂರು: ಗಾಂಧಿಯನ್ನು ಕೊಂದ ವಂಶದವರು “ಮಹಾತ್ಮ ಗಾಂಧಿ” ಯ ಪ್ರತಿಮೆ ಮುಂದೆ ಕುಳಿತುಕೊಂಡಿದ್ದಾರೆ. ಇವರು ನಾಥೂರಾಮ್ ಗೋಡ್ಸೆಯ ಬಳಿ ಹೋಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಶಾಸಕರು ಸರಕಾರದ ವಿರುದ್ಧ ಪ್ರತಿಭಟಿಸಿ ಕಲಾಪ ಬಹಿಷ್ಕರಿಸಿ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುತ್ತಿದ್ದು ಇದೀಗ ಅದನ್ನು ಲೇವಡಿ ಮಾಡಿರುವ ಸಿದ್ದರಾಮಯ್ಯ, ಮಹಾತ್ಮ ಗಾಂಧೀಜಿ ನ್ಯಾಯದ ಪರ. ಆದರೆ ಅವರನ್ನು ಕೊಂದ ವಂಶಸ್ಥರು ಅವರ ಬಳಿ ನ್ಯಾಯಕ್ಕಾಗಿ ಕುಳಿತದ್ದು ವಿಪರ್ಯಾಸ ಎಂದರು.

ಬಿಜೆಪಿಯವರು ಜನ ವಿರೋಧಿಗಳು. ಬಜೆಟ್ ಕುರಿತು ಚರ್ಚೆ ಮಾಡಿ ಬೆಳಕು ಚೆಲ್ಲಬೇಕಿತ್ತು. ಕೇವಲ ಇಬ್ಬರು ಬಿಜೆಪಿ ಸದಸ್ಯರು ಮಾತ್ರ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರ ವೈಫಲ್ಯ ಎತ್ತಿ ಹಿಡಿದು ಜನ ವಿರೋಧಿ ಗಳು, ಪ್ರಜಾಪ್ರಭುತ್ವದ ವಿರೋಧಿಗಳು ಎಂದರು. ಇಂತಹ ಘಟನೆ ಕರ್ನಾಟಕದ ಇತಿಹಾಸದಲ್ಲಿ ನಡೆದಿಲ್ಲ ಎಂದು ಹೇಳಿದರು.

Latest Indian news

Popular Stories