ಸಿದ್ಧರಾಮಯ್ಯ ಬಜೆಟ್ ಮಂಡನೆ – 3 ಲಕ್ಷ 27 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್‌

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 14 ನೇ ಬಜೆಟನ್ನು ಮಂಡಿಸಿದರು. 3 ಲಕ್ಷ 27 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್‌ ಇದಾಗಿದ್ದು ಐದು ಗ್ಯಾರಂಟಿಗಳನ್ನು ಒಳಗೊಂಡಿದೆ.

ಸ್ಪೀಕರ್ ಯುಟಿ ಖಾದರ್ ಅನುಮತಿಯೊಂದಿಗೆ ಬಜೆಟ್ ಆರಂಭಿಸಿದ ಸಿಎಮ್ ಸಿದ್ದರಾಮಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಸ್ಮರಿಸಿ ಬಜೆಟ್‌ ಮಂಡಿಸುತ್ತಿದ್ದೇನೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಪಾಲು ತತ್ವದಡಿ ಬಜೆಟ್‌ ಮಂಡನೆ ಎಂದರು.

ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು…ಆದರೆ ಕನಸಿಲ್ಲದ ಹಾದಿಯಲ್ಲಿ ನಡೆಯಲು ಹೇಗೆ ಸಾಧ್ಯ…ಗಿರೀಶ್‌ ಕಾರ್ನಾಡ್‌ ಯಯಾತಿ ನಾಟಕದ ಹಾಡಿನ ಸಾಲನ್ನು ಉಚ್ಛರಿಸಿದ ಸಿಎಂ, ಸಮಾಜದ ದುರ್ಬಲ ವರ್ಗದ ಕಲ್ಯಾಣ, ಪರಿಸರ ಸಂರಕ್ಷಣೆ ನಮ್ಮ ಸರ್ಕಾರದ ಆಶಯವಾಗಿದೆ ಎಂದರು.ರಾಜ್ಯದಲ್ಲಿ ಕತ್ತಲು ಈಗ ಮಾಯವಾಗಿದೆ. ಅಬಕಾರಿ ತೆರಿಗೆ ಶೇ.20ರಷ್ಟು ಹೆಚ್ಚಳ. ನಮ್ಮ ಸರ್ಕಾರ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ.

ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡೋದು ನಮ್ಮ ಗುರಿ. ಸರ್ವಜನಾಂಗದ ಶಾಂತಿಯ ತೋಟ ನಮ್ಮ ಧ್ಯೇಯವಾಗಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ವಿಪಕ್ಷಗಳು ಮಾಡಬಾರದು. ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದರು.

ಬಜೆಟ್ ಹೈಲೆಟ್ಸ್:


ಶಾಲಾ-ಕಾಲೇಜುಗಳಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ. ಈ ಯೋಜನೆಗೆ 200 ಕೋಟಿ ರೂಪಾಯಿ ಅನುದಾನ.


ಮೀನುಗಾರಿಕೆ ದೋಣಿಗಳಲ್ಲಿ ಸೀಮೆಎಣ್ಣೆ ಇಂಜಿನ್ ಗಳನ್ನು ಡೀಸೆಲ್ ಇಂಜಿನ್ ಮಾಡಲು ತಲಾ 50 ಸಾವಿರ ಸಹಾಯಧನ


ಹಿಂದಿನ ಸರ್ಕಾರದ ಪಠ್ಯ ಪರಿಷ್ಕರಣೆಗೆ ನಿರ್ಧಾರ


ಮೈಸೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ


ದೇಶದಲ್ಲೆ ಮೊದಲ ಅಂಗಾಂಗ ಜೋಡಣೆ ಆಸ್ಪತ್ರೆ ಸ್ಥಾಪನೆ


ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ. ಕಲುಗುಬರಗಿಯಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ


ಮೀನುಗಾರರಿಗೆ 50 ಸಾವಿರದಿಂದ ಮೂರು ಲಕ್ಷದವರೆಗೆ ಸಾಲದ ಮಿತಿ ಏರಿಕೆ


ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ


ಬೆಂಗಳೂರಿಗೆ ಬಂಪರ್‌ ಕೊಡುಗೆ ಕೊಟ್ಟ ಸಿಎಂ. ಜಾನುವಾರುಗಳ(ಹಸು, ಎಮ್ಮೆ) ಆಕಸ್ಮಿಕ ಸಾವುಗಳಿಗೆ 10 ಸಾವಿರ ಪರಿಹಾರ. ಕುರಿ, ಮೇಕೆ ಸಾವನ್ನಪ್ಪಿದರೆ 5 ಸಾವಿರ ಪರಿಹಾರ.


ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ 5 ಕೋಟಿ ರೂಪಾಯಿ. ಬೆಂಗಳೂರಿನಲ್ಲಿ ವೈಟ್‌ ಟಾಪಿಂಗ್‌, ರಸ್ತೆ, ತ್ಯಾಜ್ಯ ನಿರ್ವಹಣೆ, ನಗರೋತ್ಥಾನಕ್ಕೆ 45 ಸಾವಿರ ಕೋಟಿ ಅನುದಾನ


ಇಂದಿರಾ ಕ್ಯಾಂಟಿನ್‌ ಗೆ 100 ಕೋಟಿ ರುಪಾಯಿ. 5 ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ.


ಕೃಷಿ ನವೋದ್ಯಮಕ್ಕೆ 10 ಕೋಟಿ. 100 ಸಹಕಾರಿ ಸಂಸ್ಥೆಗಳಿಗೆ 20 ಲಕ್ಷ ರೂಪಾಯಿ ಸಾಲ ಸೌಲಭ್ಯ. ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್‌ ಗೆ 10 ಕೋಟಿ.


ಮೈಸೂರು ಕಲಬುರಗಿಯಲ್ಲಿ ಟ್ರಾಮಾ ಸೆಂಟರ್.‌ ಆರೋಗ್ಯ ಇಲಾಖೆಗೆ 14,950 ಕೋಟಿ ರೂಪಾಯಿ ಅನುದಾನ. ಸಮಾಜ ಕಲ್ಯಾಣ ಇಲಾಖೆಗೆ 11,173.


ಕೃಷಿ ಭಾಗ್ಯ ಯೋಜನೆಗಳಿಗೆ ಮನ್ರೇಗಾ ಯೋಜನೆಯಡಿ 100 ಕೋಟಿ ರೂಪಾಯಿ. ಅನುಗ್ರಹ ಯೋಜನೆ ಮರುಜಾರಿ.


ರಾಮನಗರ, ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ. ಚಿಕ್ಕಮಗಳೂರು ಕಾಫಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು. ನಮ್ಮ ಮೆಟ್ರೋಗೆ 30,000 ಕೋಟಿ.

ತೆಂಗು, ಅಡಕೆ, ದ್ರಾಕ್ಷಿ ದಾಳಿಂಬೆ ಬೆಳೆ ಸಂಸ್ಕರಣೆಗೆ ಕ್ರಮ. 75 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ.


ಆಗಸ್ಟ್‌ ತಿಂಗಳಿನಲ್ಲಿ ಗೃಹಜ್ಯೋತಿ ಯೋಜನೆ ಆರಂಭ. ಬಿಯರ್‌ ಮೇಲಿನ ಅಬಕಾರಿ ಸುಂಕ ಶೇ.10ರಷ್ಟು ಹೆಚ್ಚಳ.

Latest Indian news

Popular Stories