ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕೇರಳದಿಂದ ಪ್ಯಾಲೆಸ್ತೀನ್‌ಗೆ ಬೆಂಬಲ ಘೋಷಿಸಿ ಹಾಡು ಬಿಡುಗಡೆ

ಜಮಾತ್-ಎ-ಇಸ್ಲಾಮಿ ಹಿಂದ್‌ನ ಕೇರಳ ಘಟಕದ ಯುವ ಸಂಘಟನೆ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ (SYM) ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ “ಸಾಂಗ್ ಆಫ್ ರೆಸಿಸ್ಟೆನ್ಸ್” ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಡಾ. ನಹಾಸ್ ಮಾಲಾ ಬರೆದ ಭಾವನಾತ್ಮಕ ಸಾಹಿತ್ಯವು ಪ್ಯಾಲೆಸ್ತೀನ್ ಜನರ ನಂಬಿಕೆ ಮತ್ತು ಕಷ್ಟಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.

ಮುಹಾಸಿನ್ ಕುರಿಕ್ಕಲ್ (ಸಂಗೀತ), ಮುಹಮ್ಮದ್ ಸ್ಸಂಶೀದ್ (ಪ್ರೋಗ್ರಾಮಿಂಗ್ ಮತ್ತು ಮಿಕ್ಸ್) ಮತ್ತು ಜಸಿಮ್ ಜಮಾಲ್ ಮತ್ತು ಡಾನಾ ರಾಝಿಕ್ ಅವರ ಗಾಯನದ ಪ್ರತಿಭೆಗಳನ್ನು ಒಳಗೊಂಡಿರುವ ಈ ಹಾಡು, ಪ್ಯಾಲೆಸ್ತೀನ್ ಹೋರಾಟದ ಸಾರವನ್ನು ಸೆರೆಹಿಡಿದಿದೆ. ನಯೀಮುದ್ದೀನ್ ಪಿಎನ್, ಜೆವಾದ್ ಮತ್ತು ಮುಝಮ್ಮಿಲ್ ಅವರು ಜೊತೆಗೂಡಿ ಚಿತ್ರೀಕರಿಸಿದ ವೀಡಿಯೊ ಪ್ರತಿರೋಧದ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟಿದೆ.

ಸಾಹಿತ್ಯವು ಪ್ಯಾಲೇಸ್ಟಿನಿಯನ್ ಇಂತಿಫಾದದ ಮನೋಭಾವವನ್ನು ಪ್ರತಿಧ್ವನಿಸುತ್ತದೆ.ಇದು ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯ ಇಸ್ರೇಲಿ ಆಕ್ರಮಣದ ವಿರುದ್ಧ ಸಶಸ್ತ್ರ ಸಂಘರ್ಷದ ಮೇಲೆ ಬೆಳಕು ಚೆಲ್ಲಿದೆ.

ಮುಹಮ್ಮದ್ ಸಫ್ವಾನ್, ಮುಹಮ್ಮದ್ ಶಫಾಕ್ ಮತ್ತು ಧೂದು ಸೇರಿದಂತೆ ನಿರ್ಮಾಣ ತಂಡವು ಶ್ರಮ ಪಟ್ಟು ನಿರ್ಮಿಸಿರುವ ವೀಡಿಯೋ ಇದೀಗ ವೈರಲಾಗುತ್ತಿದೆ.

ಹಾಡಿನ ಲಿಂಕ್:

Latest Indian news

Popular Stories