ಮಂಗಳೂರು, ಆ.12: ಸೌಜನ್ಯ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಬಿಜೆಪಿ ದೃಢವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶನಿವಾರ ಆಗಸ್ಟ್ 12 ರಂದು ಇಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ನಳಿನ್, “ನಾವು ಪ್ರಕರಣದ ಮರು ತನಿಖೆಗೆ ಒತ್ತಾಯಿಸುತ್ತೇವೆ. ಇದರಿಂದಾಗಿ ನಿಜವಾದ ಅಪರಾಧಿಯನ್ನು ಬಂಧಿಸಿ ಆ ಮೂಲಕ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುತ್ತದೆ.
ಸೌಜನ್ಯ ಅವರ ಕುಟುಂಬಕ್ಕೆ ನ್ಯಾಯ ಮತ್ತು ಪ್ರಕರಣದ ಮರು ತನಿಖೆಗಾಗಿ ಆಗಸ್ಟ್ 27 ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಮರುದಿನ ಬಿಜೆಪಿ ತನ್ನ ನಿಯೋಗದೊಂದಿಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅದೇ ಬೇಡಿಕೆಗಳನ್ನು ಮುಂದಿಡಲಿದೆ ಎಂದು ನಳಿನ್ ಹೇಳಿದರು.
ಶಾಸಕರಾದ ವೇದವಾಸ್ ಕಾಮತ್, ಡಾ ಭರತ್ ವೈ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು.