ಮೋದಿ ಸರ್ಕಾರಕ್ಕೆ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಒಡನಾಡಿ ಸುಧೀಂದ್ರ ಕುಲಕರ್ಣಿ ಮೂರು ಪ್ರಶ್ನೆ

ವಿಜಯಪುರ : ಪ್ರಸ್ತುತ ಡಬಲ್ ಇಂಜಿನ್ ಸರ್ಕಾರವಿದ್ದರೂ ರಾಕೆಟ್ ವೇಗದ ಬೆಲೆ ಏರಿಕೆ ಏಕೆ ನಿಯಂತ್ರಿಸಲಿಲ್ಲ? ನಾ ಖಾವೂಂಗಾ, ನಾ ಖಾನೇ ದೂಂಗಾ ಎಂದು ಹೇಳಿದ ಮೋದಿ ಅವರು ಶೇ.40 ರಷ್ಟು ಕಮೀಷನ್ ಬಿಜೆಪಿ ಸರ್ಕಾರದ ಬಗ್ಗೆ ಯಾವ ಉತ್ತರವೂ ಏಕೆ ನೀಡಿಲ್ಲ? ಗೃಹ ಸಚಿವ ಅಮೀತ್ ಷಹಾ ಅವರು ಕರ್ನಾಟಕದಲ್ಲಿ ಧಂಗೆಯಾಗುತ್ತವೆ ಎಂದು ಹೇಳಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಏನು ಹೇಳುತ್ತೀರಿ? ಅಲ್ಲಿಯೂ ಡಬಲ್ ಇಂಜಿನ್ ಸರ್ಕಾರವಿದೆ, ಇದಕ್ಕೆ ಏನು ಹೇಳುವಿರಿ? ಎಂದು ಖ್ಯಾತ ಚಿಂತಕ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಒಡನಾಡಿಗಳಾಗಿರುವ ಸುಧೀಂದ್ರ ಕುಲಕರ್ಣಿ ಅವರು ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳಿವು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿಶ್ಲೇಷಣೆ ಮಾಡಿದ ಕುಲಕರ್ಣಿ ಅವರು, ಆಪರೇಷನ ಕಮಲ ಎನ್ನುವ ಪ್ರಜಾಪ್ರಭುತ್ವ ಅಪಹರಣ ನಡೆಯಬಾರದು, ಜನತೆ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು, ಡಬಲ್ ಇಂಜಿನ್ ಸರ್ಕಾರ ಎನ್ನುವುದೇ ಪ್ರಜಾಪ್ರಭುತ್ವ ವಿರೋಧಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ತಮಗೆ ಇಷ್ಟದ ಪಕ್ಷಕ್ಕೆ ಆಯ್ಕೆ ಮಾಡುವ ಸ್ವಾತಂತ್ರö್ಯವಿದೆ, ರಾಜ್ಯದಲ್ಲಿ-ಕೇಂದ್ರದಲ್ಲಿಯೂ ಬಿಜೆಪಿ ಇರಬೇಕು, ರಾಜ್ಯದಲ್ಲಿ ಬಿಜೆಪಿ ಇದ್ದರೆ ಮಾತ್ರ ಕೇಂದ್ರ ಯೋಜನೆಗಳಿಗೆ ಸಂಬAಧಿಸಿದAತೆ ಸಹಕಾರ ನೀಡುವ ಬಿಜೆಪಿ ಮಾತುಗಳು ಪ್ರಜಾಪ್ರಭುತ್ವಕ್ಕೆ ಮಾರಕ, ಬೇರೆ ಪಕ್ಷಕ್ಕೆ ಮತ ಚಲಾಯಿಸಿದರೆ ಕೇಂದ್ರದ ಸಹಕಾರ ಸಿಗುವುದಿಲ್ಲ ಎಂದು ಹೇಳಿರುವುದು ಖಂಡನಾರ್ಹ ಎಂದು ಕುಲಕರ್ಣಿ ವಾಗ್ದಾಳಿ ನಡೆಸಿದರು.

ಡಬಲ್ ಇಂಜಿನ್ ಸರ್ಕಾರಕ್ಕೆ ಸಿಂಗಲ್ ಡ್ರೈವರ್ ಎನ್ನುವಂತೆ ಕರ್ನಾಟಕದ ಮುಖ್ಯಮಂತ್ರಿಗೆ ಬೆಲೆ ಇಲ್ಲದ ರೀತಿಯಲ್ಲಿ ರಿಮೋಟ್ ಕಂಟ್ರೋಲ್ ಸರ್ಕಾರ ಮಾಡುವ ಹುನ್ನಾರ ನಡೆಸಿರುವ ಬಿಜೆಪಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ, ರಾಜ್ಯದಲ್ಲಿ ತ್ರಿಶಂಕು ಸರ್ಕಾರ ಬಂದರೆ ದೊಡ್ಡ ಅಪಾಯವಿದೆ, ಕೆಲವೇ ಸೀಟುಗಳು ಬಹುಮತ ಕಡಿಮೆ ಬಂದರೆ ಗೋವಾ, ಮಧ್ಯಪ್ರದೇಶ, ಮಹಾರಾಷ್ಟçದಲ್ಲಿ ಸರ್ಕಾರ ರಚಿಸಿದಂತೆ ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ, ಹೀಗಾಗಿ ಏಕಪಕ್ಷಕ್ಕೆ ಬಹುಮತ ನೀಡುವ ನಿಟ್ಟಿನಲ್ಲಿ ಜನತೆ ಯೋಚಿಸಬೇಕು ಎಂದರು.

ಭ್ರಷ್ಟಾಚಾರ ಎಂಬುದು ಮಾರಕ ರೋಗ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ನಾನು ಹೇಳುತ್ತಿಲ್ಲ, ಆದರೆ ಸರ್ಕಾರಕ್ಕೆ ಅಂಕುಶವನ್ನು ಪ್ರಬಲವಾಗಿ ಹಾಕುವ ಕೆಲಸ ನಡೆಯಬೇಕು ಎಂದರು.

ಆರ್‌ಎಸ್‌ಎಸ್‌ದಲ್ಲೂ ಅಸಮಾಧಾನ
ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾನಿ ನಿಜಕ್ಕೂ ಆದರ್ಶ ನಾಯಕರು, ಯಾವ ರೀತಿ ಪ್ರಜಾಪ್ರಬುತ್ವದ ಆದರ್ಶ ರಾಜಕಾರಣಕ್ಕೆ ಹೆಸರಾಗಿದ್ದಾರೆ, ಈಗಿನ ಬಿಜೆಪಿ ನಾಯಕರು ಈ ನಾಯಕರ ಹೆಸರುಗಳನ್ನೇ ಮರೆತಿದ್ದಾರೆ, ಮೋದಿ-ಅಮೀತ್ ಷಹಾ ಅವರ ಕೆಳಗೆ ಪಕ್ಷ ಸಿಲುಕಿದೆ, ಸಂಘಪರಿವಾರದ ಹಿಡಿತದಲ್ಲಿಯೂ ಬಿಜೆಪಿ ಇಲ್ಲ, ಆರ್‌ಎಸ್‌ಎಸ್ ವರಿಷ್ಠರಲ್ಲಿಯೂ ಅಸಂತೋಷ ಮನೆ ಮಾಡಿರುವುದು ಸತ್ಯ. ಆರ್‌ಎಸ್‌ಎಸ್‌ನಲ್ಲಿ ತತ್ವನಿಷ್ಠತೆ, ರಾಷ್ಟ್ರಭಕ್ತಿ, ಶಿಸ್ತು ಇರುವುದರಲ್ಲಿ ಎರಡು ಮಾತಿಲ್ಲ. ಆರ್‌ಎಸ್‌ಎಸ್ ಭ್ರಷ್ಟಾಚಾರವನ್ನು ಸಹಿಸಿಕೊಂಡಿಲ್ಲ, ಕರ್ನಾಟಕದಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಾಗಲೂ ಆರ್‌ಎಸ್‌ಎಸ್ ಏಕೆ ಧ್ವನಿ ಎತ್ತಲಿಲ್ಲ ಎಂದು ಕುಲಕರ್ಣಿ ಹೇಳಿದರು.

ಭಜರಂಗದಳ ನಿಷೇಧ ವಿಷಯನ್ನು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಇರುವ ಔಚಿತ್ಯವಿರಲಿಲ್ಲ. ಭಜರಂಗದಳ ನಿಷೇದಿತ ಕೃತ್ಯವೆಸಗುತ್ತದೆ ಆದರೆ, ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಅಗತ್ಯವಿರಲಿಲ್ಲ ಎಂದರು.

ವಿರೋಧ ಪಕ್ಷಗಳ ನಾಯಕರ ಮೇಲೆ ಇ.ಡಿ., ಸಿಬಿಐ ದಾಳ ಬಳಸುವುದು ಸರಿಯಲ್ಲ, ಬಿಜೆಪಿಯ ಯಾವ ನಾಯಕರು ಜೈಲಿಗೆ ಹೋಗಿಲ್ಲ, ಹಾಗಾದರೆ ಬಿಜೆಪಿ ನಾಯಕರು ಸಂಪೂರ್ಣ ಶುದ್ಧ ಹಸ್ತರೇ? ಎಂದು ಪ್ರಶ್ನಿಸಿದರು.

ಎಂಬಿಪಿ ಅವಧಿಯಲ್ಲಿ ಸುಜಲಾಂ ಸುಫಲಾಂ
ಒಂದು ಕಾಲಕ್ಕೆ ಸತತವಾಗಿ ಬರಗಾಲಪೀಡಿತ ಜಿಲ್ಲೆ ವಿಜಯಪುರವನ್ನು ಎಂ.ಬಿ.ಪಾಟೀಲ್ ಇಂದು ‘ಸುಜಲಾಂ ಸುಫಲಾಂ’ ಮಾಡಿದ್ದಾರೆ. ಇದು ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ದೇಶಕ್ಕೆ ಒಂದು ಮಾದರಿ, ಮುಂದಿನ ಕಾಂಗ್ರೆಸ್ ಸರಕಾರದಲ್ಲಿ ಎಂ.ಬಿ. ಪಾಟೀಲ್ ಇವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಗುವುದು ಖಚಿತ, ವಿಜಯಪುರ ಮತ್ತು ಸುತ್ತಲಿನ ಜಿಲ್ಲೆಗಳಿಗೆ ರಾಜ್ಯದ ಅಭಿವೃದ್ಧಿಯ ನಕಾಶೆಯಲ್ಲಿ ಬೆಂಗಳೂರು-ಮೈಸೂರಿಗೆ ಸಮಾನವಾದ ಸ್ಥಾನ ದೊರಕಿಸುವುದು ಅವರ ಕನಸಾಗಿದೆ. ಇಲ್ಲಿ ಭಾರಿ ಪ್ರಮಾಣದಲ್ಲಿ ದೇಶ-ವಿದೇಶದ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಎಂ.ಬಿ. ಪಾಟೀಲ ಮಹತ್ವಕಾಂಕ್ಷೆ ಶಾಘ್ಲನೀಯ ಎಂದರು. ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ, ಇತಿಹಾಸ ಸಂಶೋಧನ ಸಂಸ್ಥೆಯು ವಚನ ಸಾಹಿತ್ಯದ ಮಹತ್ವವನ್ನು ಜನತೆಗೆ ಉಣ ಬಡಿಸುವ ಮೂಲಕ ಸಾಂಸ್ಕೃತಿಕ ವಿರಾಸತ್ ರೂಪದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

Latest Indian news

Popular Stories