ಸುರತ್ಕಲ್: ಅಪಾಯಕಾರಿ ಟೋಲ್ ಅವಶೇಷ ತೆರವಿಗೆ ಆಗ್ರಹ

ಮಂಗಳೂರು: ಭಾರೀ ಹೋರಾಟದ ಬಳಿಕ ಸುರತ್ಕಲ್ ಎನ್ಐಟಿಕೆ ಬಳಿಯಿರುವ ಟೋಲ್ ಗೇಟ್ ಕಳೆದ ವರ್ಷ ತೆರವಾಗಿದ್ದರೂ, ಅದರ ಅವಶೇಷಗಳನ್ನು ಇನ್ನೂ ತೆರವುಗೊಳಿಸಿಲ್ಲ.

ಈ ಅಳಿದುಳಿದ ಅವಶೇಷಗಳಿಂದ ವಾಹನ ಸವಾರರಿಗೆ ತೊಂದರೆಯಾಗಿದ್ದು, ಹಲವು ಅಪಘಾತಗಳಿಗೂ ಕಾರಣವಾಗಿದೆ.
ಇತ್ತೀಚೆಗೆ ಟೋಲ್ ಗೇಟ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಬ್ಬಿಣದ ಕಂಬ ನೇತಾಡುತ್ತಿದ್ದು, ಬೀಳುವ ಸ್ಥಿತಿಯಲ್ಲಿದೆ. ಇಷ್ಟಾದರೂ ಹೆದ್ದಾರಿ ಪ್ರಾಧಿಕಾರ ಮಾತ್ರ, ತನಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದೆ. ಆದ್ದರಿಂದ ಟೋಲ್ ಅವಶೇಷ ತೆರವು ಮಾಡದಿದ್ದಲ್ಲಿ ನಾವೇ ನೇರ ಕಾರ್ಯಾಚರಣೆ ಮಾಡುತ್ತೇವೆ ಎಂದು ಟೋಲ್ ವಿರೋಧ ಸಮಿತಿಯವರು ಎಚ್ಚರಿಕೆ ನೀಡಿದ್ದಾರೆ.

ಹಲವು ಅಪಘಾತಗಳಿಗೆ ಕಾರಣವಾದ ಟೋಲ್ ಅವಶೇಷ ತೆರವುಗೊಳಿಸದಿದ್ದಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಟೋಲ್ ವಿರೋಧಿ‌ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಶೀಘ್ರದಲ್ಲಿಯೇ ಅವಶೇಷ ತೆರವುಗೊಳಿಸದಿದ್ದಲ್ಲಿ ನೇರ ಕಾರ್ಯಚರಣೆ ನಡೆಸಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಈ ಟೋಲ್ ಅವಶೇಷವನ್ನು ತೆರವು ಮಾಡಿದ್ದಲ್ಲಿ ಭಾರೀ ದುರಂತವನ್ನು ತಪ್ಪಿಸಿದಂತಾಗುತ್ತದೆ.

Latest Indian news

Popular Stories