ಚೈತ್ರಾ ಕುಂದಾಪುರಳಿಗೆ ಯಾವುದೇ ಆಶ್ರಯ ನೀಡಿಲ್ಲ | ಸಿಸಿಬಿಯಿಂದ ನೋಟಿಸ್ ಬಂದಿಲ್ಲ – ಎಲ್ಲವೂ ಸುಳ್ಳು ಸುದ್ದಿ ಎಂದ ಸುರಯ್ಯಾ ಅಂಜುಮ್

ಉಡುಪಿ: ಚೈತ್ರಾ ಕುಂದಾಪುರ ಬಂಧನದ ನಂತರ ಆಕೆ ಹಲವು ದಿನಗಳ ಕಾಲ ತಲೆಮರೆಸಿಕೊಳ್ಳಲು ಸುರಯ್ಯ ಅಂಜುಮ್ ಎಂಬ ಆಕೆಯ ಸ್ನೇಹಿತೆಯ ಅಪಾರ್ಟ್ಮೆಂಟ್ ನಲ್ಲಿ ಆಶ್ರಯ ಪಡೆದಿದ್ದಳು ಎಂಬ ಸುದ್ದಿ ಹರಡಿತ್ತು.

ಇದೀಗ ಸುರಯ್ಯ ಅಂಜುಮ್ ಇದರ ಕುರಿತು ಸ್ಪಷ್ಟನೆ ನೀಡಿದ್ದು ಚೈತ್ರಾ ತನ್ನ ಆಶ್ರಯದಲ್ಲಿರಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಆಕೆ ನನ್ನ ಸಹೋದ್ಯೋಗಿಯಾಗಿದ್ದಳು ನಿಜ. ಆದರೆ ಆಕೆಗೆ ಒಂದು ವಾರದಿಂದ ಆಶ್ರಯ ನೀಡಿಲ್ಲ ಇದೆಲ್ಲ ಸುಳ್ಳು ಸುದ್ದಿಯೆಂದು ಸ್ಪಷ್ಟನೆ ನೀಡಿದ್ದಾರೆ.

ಯಾರೋ ತಮ್ಮ ಮೇಲಿರು ದ್ವೇಷದ ಕಾರಣಕ್ಕೆ ಈ ಸುಳ್ಳು ಸುದ್ದಿ ಹಬ್ಬಿದ್ದಾರೆ. ನಾನು ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿ ಇದ್ದೇನೆ. ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಸಿಸಿಬಿ ನನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಹರಡಿದ್ದ ಗೊಂದಲದ ಕುರಿತು ಸ್ಪಷ್ಟನೆ ನೀಡಿದ್ದಾರೆ.

Latest Indian news

Popular Stories