
Featured Story
ಅಧ್ಯಕ್ಷರ ಭವನ ಪ್ರವೇಶಿಸಿದ ತಾಲಿಬಾನ್: ಯುದ್ಧ ಸಮಾಪ್ತಿ ಎದ್ದ ತಾಲಿಬಾನಿಗಳು!
ಅಫಘಾನಿಸ್ತಾನ: ಇದೀಗ ರಾಜಧಾನಿ ಕಾಬೂಲ್ ಒಳಗೆ ಪ್ರವೇಶಿಸಿರುವ ತಾಲಿಬಾನಿಗಳು ಯುದ್ಧ ಸಮಾಪ್ತಿಗೊಂಡಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಕೂಡಲೇ ರಾಷ್ಟ್ರದ ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ. ಅದರೊಂದಿಗೆ ಅಧ್ಯಕ್ಷರ ಭವನದೊಳಗೆ ಕಾಲಿಟ್ಟಿದ್ದಾರೆ. ಇದೀಗ ಅಂತರಿಕ ಸರಕಾರ ರಚನೆಯ ಕುರಿತು ಮಾತುಕತೆ ನಡೆಯುತ್ತಿರುವುದಾಗಿ ತಾಲಿಬಾನ್ ಹೇಳಿಕೆ ನೀಡಿರುವುದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅದರೊಂದಿಗೆ ಯುದ್ಧ ಮುಗಿದಿದ್ದು ಅಂತರಾಷ್ಟ್ರೀಯ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಹೊಂದಲು, ಶಾಂತಿ ಕಾಪಾಡಲು ತಾಲಿಬಾನ್ ಸಿದ್ಧವಾಗಿದೆಯೆಂದು ವಕ್ತಾರ ಮುಹಮ್ಮದ್ ನಯೀಮ್ ಹೇಳಿದ್ದಾನೆ. 20 ವರ್ಷದ ಬಲಿದಾನಕ್ಕೆ ಇಂದು ಫಲ ಸಿಕ್ಕಿದೆಯೆಂದು ತಾಲಿಬಾನಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.




