ಮನುಷ್ಯರ ನಡುವಿನ ತಾರತಮ್ಯವು ಸನಾತನ ಧರ್ಮವಲ್ಲ – ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ

ಚೆನ್ನೈ: ಸನಾತನ ಧರ್ಮದಲ್ಲಿ ಅಸ್ಪೃಶ್ಯತೆ ಅಥವಾ ತಾರತಮ್ಯಕ್ಕೆ ಜಾಗವಿಲ್ಲ,  ಜನರನ್ನು ಒಂದೇ ಕುಟುಂಬವಾಗಿ ಒಗ್ಗೂಡಿಸುವ ಈ ಪ್ರಾಚೀನ ಧರ್ಮದ ಮೂಲಭೂತ ಲಕ್ಷಣಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಶನಿವಾರ ಹೇಳಿದ್ದಾರೆ.

ಇಲ್ಲಿನ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ,  ಮಧ್ವಾಚಾರ್ಯ, ರಾಘವೇಂದ್ರ ಸ್ವಾಮಿ,  ನಾಯನ್ಮಾರ್‌ ಮತ್ತು ಆಳ್ವಾರರಂತಹ ಭಾರತದ ಸಂತರ ಪರಂಪರೆಯನ್ನು ಉಲ್ಲೇಖಿಸಿದ ಅವರು, ಈ ಸಂತರು, ಸಮಾನತೆಯ ಪರ ನಿಂತರು. ರಾಮಾನುಜಾಚಾರ್ಯರು ಸೇರಿದಂತೆ ಹಲವು ಸಂತರು ಸಮಾನತೆಯ ಮಹಾನ್ ಪ್ರತಿಪಾದಕರು ಎಂದರು. 

ಸನಾತನ ಧರ್ಮದ ಇಂತಹ ಸಂಪ್ರದಾಯ ಮತ್ತು ಅದರ ಮೌಲ್ಯಗಳು ಸಂತರಿಂದ ಪೀಳಿಗೆಯ ಜನರಿಗೆ ರವಾನಿಸಲಾಗಿದ್ದು, ಇದು ವಿಶಿಷ್ಟವಾಗಿದೆ ಮತ್ತು ಯಾವುದೇ ನಾಗರಿಕತೆಯು ಅಂತಹ ಜೀವಂತ ಪ್ರಾಚೀನ ಸಂಪ್ರದಾಯವನ್ನು ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಅಜ್ಞಾನದಿಂದ, ಸನಾತನ ಧರ್ಮದಲ್ಲಿ ತಾರತಮ್ಯ, ಅಸ್ಪೃಶ್ಯತೆಯಿದೆ   ಎಂದು ಹೇಳಲು ಪ್ರಯತ್ನಿಸುತ್ತಾರೆ. ಆದರೆ ಅವುಗಳು ಇಲ್ಲ. ಮನುಷ್ಯರ ನಡುವಿನ ತಾರತಮ್ಯವು ಸನಾತನ ಧರ್ಮವಲ್ಲ ಮತ್ತು ಅಸ್ಪೃಶ್ಯತೆಗೆ ಸನಾತನ ಧರ್ಮದಲ್ಲಿ ಜಾಗವಿಲ್ಲ ಎಂದರು. 

ಸುಂದರವಾದ ಚೆನ್ನೈ ನಗರ’ ಮಹಾನ್ ವ್ಯಕ್ತಿಗಳು, ಬುದ್ಧಿಜೀವಿಗಳು, ಕಲಾವಿದರು ಮತ್ತು ಆಧ್ಯಾತ್ಮಿಕ ನಾಯಕರಿಗೆ ನೆಲೆಯಾಗಿದೆ. ಅಲ್ಲದೆ, ನಗರದಲ್ಲಿ ಕೆಲವು ತೆರೆದ ಗಟಾರಗಳು ಮತ್ತು ಚರಂಡಿಗಳಿದ್ದು, ಅವುಗಳನ್ನು ಶುದ್ಧೀಕರಿಸಬೇಕು.ಅದೇ ರೀತಿ ಯಾರಾದರೂ ಸನಾತನ ಧರ್ಮದ ಮೇಲೆ ಸಾಮಾಜಿಕ ತಾರತಮ್ಯ ಅಥವಾ ಅಸ್ಪೃಶ್ಯತೆ ಆರೋಪ ಮಾಡಲು ಪ್ರಯತ್ನಿಸಿದರೆ ಅದು ಸತ್ಯಕ್ಕೆ ದೂರವಾಗಿದೆ ಎಂದರು.

Latest Indian news

Popular Stories