ತಮಿಳುನಾಡು: ಮಧುರೈ ಜಂಕ್ಷನ್‌ನಲ್ಲಿ ಸ್ಟೇಷನರಿ ಕೋಚ್‌‌ಗೆ ಬೆಂಕಿ, ಒಂಬತ್ತು ಮಂದಿ ಮೃತ್ಯು

ಮಧುರೈ: ಇಲ್ಲಿನ ಜಂಕ್ಷನ್‌ನಲ್ಲಿ ನಿಂತಿದ್ದ ಸ್ಟೇಷನರಿ ಕೋಚ್‌ನಲ್ಲಿ ಶನಿವಾರ ಬೆಳಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. 

ದಕ್ಷಿಣ ರೈಲ್ವೆಯ ಮೂಲಗಳ ಪ್ರಕಾರ, ಯಾರ್ಡ್‌ನಲ್ಲಿ ನಿಂತಿದ್ದ ಟೂರಿಸ್ಟ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Latest Indian news

Popular Stories