ವದಂತಿ ಹಬ್ಬಿಸಿದ್ದಕ್ಕೆ ಹಿಂದಿ ದೈನಿಕ ಸಂಪಾದಕರ ವಿರುದ್ಧ ತ.ನಾಡು ಪೊಲೀಸರಿಂದ ಕೇಸ್!

ಚೆನ್ನೈ: ದೈನಿಕ್ ಭಾಸ್ಕರ್ ನ ಸಂಪಾದಕರು ಹಾಗೂ ಮತ್ತೋರ್ವ ಪತ್ರಕರ್ತನ ವಿರುದ್ಧ ತಮಿಳುನಾಡಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 
ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ವಿರುದ್ಧ ದಾಳಿ ನಡೆದಿದೆ ಎಂಬ ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಪತ್ರಕರ್ತರನ್ನು ಬಂಧಿಸಲು ಡಿಜಿಪಿ ಆದೇಶದ ಪ್ರಕಾರ ವಿಶೇಷ ತಂಡಗಳನ್ನು ರಚಿಸಲಾಗಿದೆ. ತಮಿಳುನಾಡಿನಲ್ಲಿ ಉತ್ತರ ಭಾರತದ ವಲಸಿಗ ಕಾರ್ಮಿಕರು ಶಾಂತಿ ಹಾಗೂ ಭಯಮುಕ್ತವಾಗಿ ಜೀವಿಸುತ್ತಿದ್ದಾರೆ ಅವರಿಗೆ ಭದ್ರತೆ ಇದೆ ಎಂದು ಸರ್ಕಾರ ಹೇಳಿದೆ. ಎಲ್ಲಾ ವಲಸಿಗ ಕಾರ್ಮಿಕರು ಸುರಕ್ಷಿತವಾಗಿದ್ದು,  ವದಂತಿ ಹರಡಿ ಆತಂಕ ಸೃಷಿಸುವವರ ವಿರುದ್ಧ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು  ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ  ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್  ಭರವಸೆ ನೀಡಿದ್ದಾರೆ. 

Latest Indian news

Popular Stories