ತನ್ವೀರ್ ಸೇಠ್ ಪತ್ರ ವಿವಾದ: ನೀವು ಜಿಹಾದಿ ಸಂಘಟನೆಯ ಒಬ್ಬ ಸದಸ್ಯ ಎಂದು ನಾವು ಭಾವಿಸಬೇಕಾಗುತ್ತದೆ ಎಂದ ಯಶ್ಫಾಲ್ ಸುವರ್ಣ

ಉಡುಪಿ: ಡಿಜೆ ಹಳ್ಳಿ ಕೆಜೆ ಹಳ್ಳಿ ಹುಬ್ಬಳ್ಳಿ ಶಿವಮೊಗ್ಗ ಪ್ರಕರಣದ ಆರೋಪಿಗಳು ಅಮಾಯಕರು ಎಂಬ ಶಾಸಕ ತನ್ವೀರ್ ಸೇಠ್ ಪತ್ರ ವಿಚಾರವಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದು, ಇಡೀ ರಾಜ್ಯ ಮಾತ್ರ ಅಲ್ಲ ಇಡೀ ದೇಶದಲ್ಲಿ ಗಂಭೀರವಾದ ಘಟನೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ ಹಲ್ಲೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ ಎಂದಿದ್ದಾರೆ.

ಜೈನ ಮುನಿ, ವೇಣುಗೋಪಾಲ್ ಹತ್ಯೆ ಪ್ರಕರಣಗಳು ನಡೆದಿದೆ. ಗೊಂದಲ ಸೃಷ್ಟಿಸಿ ದಂಧೆಗಳಿಗೆ ಸಹಕಾರ ಕೊಡುವುದು ಕಾಂಗ್ರೆಸ್‌ ಮನಸ್ಥಿತಿಯಾಗಿದೆ. ತನ್ವೀರ್ ಸೇಠ್ ಅವರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಪಿಎಫ್ ಐ ನ 151 ಕೇಸುಗಳನ್ನು ವಾಪಸ್ ಪಡೆದಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಮತ್ತಷ್ಟು ಕೊಲೆಗಳಿಗೆ ಕಾಂಗ್ರೆಸ್ ಸರ್ಕಾರ ಸಹಕಾರ ಮಾಡಿದ್ದು ಸಾಭೀತಾಗಿದೆ. ರಾಷ್ಟ್ರ -ದೇಶದ ಬಗ್ಗೆ ಚಿಂತನೆ ಮಾಡುವ ಬಜರಂಗದಳದವರು ಅಮಾಯಕರು. ಬಜರಂಗದಳದ ಮೇಲೆ ಸುಳ್ಳು ಕೇಸು ಆರೋಪ ಮಾಡಿ ಗಡಿಪಾರು ಮಾಡುವ ಪ್ರಯತ್ನ ನಡೆದಿದೆ ಎಂದರು.

ತನ್ವೀರ್ ಸೇಠ್ ಜಿಹಾದಿಗಳನ್ನು ತಮ್ಮ ಸಮುದಾಯವನ್ನು ಬೆಂಬಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಶಾಸಕ ತನ್ವೀರ್ ಸೇಠ್ ಅವರೇ ನಿಮಗೆ ಎಚ್ಚರಿಕೆ ಮಾತನ್ನು ಹೇಳುತ್ತಿದ್ದೇವೆ. ನೀವು ಜಿಹಾದಿ ಸಂಘಟನೆಯ ಒಬ್ಬ ಸದಸ್ಯ ಎಂದು ನಾವು ಭಾವಿಸಬೇಕಾಗುತ್ತದೆ. ಜಿಹಾದಿ ಗಳಿಗೆ ಬೆಂಬಲ ನೀಡಿದರೆ ನಿಮಗೆ ಧಿಕ್ಕಾರ ಹಾಕುವ ಬಹಿಷ್ಕರಿಸುವ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ.

Latest Indian news

Popular Stories