ಟೆಲ್ ಅವಿವ್ ಶೂಟಿಂಗ್ ನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದ್ದು ಇರಾನ್‌ನಿಂದ ಕ್ಷಿಪಣಿಗಳು ಇಸ್ರೇಲ್ ಅನ್ನು ಗುರಿಯಾಗಿಸುವ ಮೊದಲು ಟೆಲ್ ಅವಿವ್‌ನ ಜಾಫಾ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ.
ಇರಾನ್ ಕ್ಷಿಪಣಿ ದಾಳಿಯಿಂದ ವಾಯುದಾಳಿ ಸೈರನ್‌ಗಳ ಮಧ್ಯದಲ್ಲಿ, ಇಸ್ರೇಲಿ ಪೊಲೀಸರು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಇಸ್ರೇಲಿ ಮಾಧ್ಯಮಗಳ ಪ್ರಕಾರ 8 ಮಂದಿ ಮೃತರಾಗಿದ್ದಾರೆ.
ಇಬ್ಬರು ದಾಳಿಕೋರರನ್ನು “ತಟಸ್ಥಗೊಳಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.