Featured StoryUdupi

ಶಿರೂರು: ಉದ್ಯಮಿಯ ಮನೆಗೆ ನುಗ್ಗಿ 18ಲಕ್ಷ ರೂ. ವೌಲ್ಯದ ನಗ ನಗದು ಕಳವು


ಬೈಂದೂರು: ಶಿರೂರು ಮಾರ್ಕೇಟ್ ಎಂಬಲ್ಲಿರುವ ಮನೆಗೆ ಎ.9ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು 18ಲಕ್ಷ ರೂ. ವೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.


ಶಿರೂರು ಮಾರ್ಕೇಟ್ನಲ್ಲಿ ಝಹರಾ ಎಂಟರ್ಪ್ರೈಸಸ್ ಎಂಬ ಹಾರ್ಡವೇರ್ ಮತ್ತು ಬಿಲ್ಡಿಂಗ್ ಮೆಟೀರಿಯಲ್ಸ್ ಅಂಗಡಿ ವ್ಯವಹಾರ ಮಾಡಿಕೊಂಡಿದ್ದ ಶಿರೂರು ಮೊಹಮ್ಮದ್ ಅಜೀಮ್ ಎಂಬವರ ಮನೆಯ ಬಾಗಿಲಿನ ಡೋರ್ ಲಾಕ್ ಒಡೆದು ಒಳ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ 10 ಲಕ್ಷ ರೂ. ಹಣ ಮತ್ತು ಚಿನ್ನದ ಬಳೆ, ಚಿನ್ನದ ಚೈನ್, ಉಂಗುರ ಸೇರಿದಂತೆ ಒಟ್ಟು 8 ಲಕ್ಷ ರೂಪಾಯಿ ಮೌಲ್ಯದ 15 ಪಾವನ್ ಚಿನ್ನದ ಒಡವೆ ಹಾಗೂ ಬೆಳ್ಳಿಯ ನಾಣ್ಯ ಮತ್ತು ಬೆಳ್ಳಿಯ ಪಾತ್ರೆ ಒಟ್ಟು ಅರ್ಧ ಕೆ.ಜಿ ತೂಕದ 30,000ರೂ. ಮೌಲ್ಯದ ಸೊತ್ತು ಹಾಗೂ ಜಯಲಕ್ಷ್ಮೀ ಅಂಗಡಿಯಿಂದ ತಂದಿದ್ದ 3,500ರೂ. ಮೌಲ್ಯದ ಗವನ್ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 18,33,500ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button