
Featured Story
ಮತ್ತೆ ಮೂರು ಪ್ರಾಂತ್ಯ ವಶಪಡಿಸಿಕೊಂಡ ತಾಲಿಬಾನ್
ಅಫಘಾನಿಸ್ತಾನ್: ತಾಲಿಬಾನ್ ಇನ್ನೂ ಮೂರು ಪ್ರಾಂತೀಯ ರಾಜಧಾನಿಗಳನ್ನು ಮತ್ತು ಈಶಾನ್ಯದ ಭಾಗದ ಸ್ಥಳೀಯ ಸೇನಾ ಪ್ರಧಾನ ಕಚೇರಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ದಂಗೆಕೋರರು ಈಗ ರಾಷ್ಟ್ರದ ಮೂರನೇ ಎರಡರಷ್ಟು ಭಾಗವನ್ನು ನಿಯಂತ್ರಿಸುತ್ತಿದ್ದಾರೆ ಏಕೆಂದರೆ ಯುಎಸ್ ಮತ್ತು ನ್ಯಾಟೋ ತನ್ನ ದಶಕಗಳ ನಂತರ ತಮ್ಮಸೇನ ಹಿಂತೆಗೆದುಕೊಳ್ಳುವಿಕೆಯ ನಂತರ ಯುದ್ಧದ ಸ್ಥಿತಿ ಏರ್ಪಟ್ಟಿದೆ.
ಇದೀಗ ಅಫಘಾನ್ ಅಧ್ಯಕ್ಷರಾದ ಅಶ್ರಫ್ ಘನಿ ಬಾಲ್ಕ್ ಪ್ರಾಂತ್ಯಕ್ಕೆ ತೆರಳಿದ್ದಾರೆ. ಇದೀಗ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ತಾಲಿಬಾನ್ ಅತಿಕ್ರಮಿಸಿಕೊಂಡಿದೆ. ತಾಲಿಬಾನ್ ಮತ್ತು ಅಫಘಾನ್ ಸರಕಾರದ ನಡುವಿನ ಯುದ್ಧದಿಂದಾಗಿ ದೇಶದ ನಾಗರಿಕರ ಸ್ಥಿತಿ ತೀರಾ ಹದೆಗೆಟ್ಟಿದೆ. ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು ಕಾಬೂಲಿನ ಬೀದಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.




