Featured StorySports

ಬಾಂಗ್ಲಾದೇಶ – ಶ್ರೀಲಂಕಾ ಪಂದ್ಯಾವಳಿಯಲ್ಲಿ ಒಂದೂ ಎಸೆತ ಎದುರಿಸದೆ ಔಟಾದ ಶ್ರೀಲಂಕಾ ಎಂಜಿಲೋ ಮ್ಯಾಥ್ಯೂ | ಕ್ರಿಕೆಟ್ ಇತಿಹಾಸದಲ್ಲಿ ಮೊದಲು – ಯಾಕೆ ಗೊತ್ತಾ?

ಕ್ರಿಕೆಟ್ ಜಗತ್ತಿನಲ್ಲೇ ಒಂದು ವಿಸ್ಮಯದ ಸಂಗತಿಗೆ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಸಾಕ್ಷಿಯಾಗಿದೆ. ಶ್ರೀಲಂಕಾದ ಬ್ಯಾಟ್ಸ್‌ಮನ್‌ ಒಂದೇ ಒಂದು ಎಸೆತ ಎದುರಿಸದೆ ಎಂಜಿಲೋ ಮ್ಯಾಥ್ಯೂ ಔಟಾಗಿದ್ದಾರೆ.

ಸಮರ ವಿಕ್ರಮ ಸಾಕೀಬ್ ಅವರ ಬೌಲಿಂಗ್ ನಲ್ಲಿ ಔಟಾದ ನಂತರ ಕ್ರೀಸ್ ಬರಲು ಎರಡು ನಿಮಿಷದ ಸಮಯಾವಕಾಶ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ಅವರು ತಡವಾಗಿ ಮೈದಾನಕ್ಕೆ ಬಂದಿದ್ದು ಅಂಪೈರ್ ಟೈಮ್ ಔಟ್ ಘೋಷಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಮೊದಲು ಎನ್ನಲಾಗಿದೆ.

ಎಂಜಿಲೋ ಮ್ಯಾಥ್ಯೂ ಅಂಪೈರ್ ಗಳನ್ನು ಒಲೈಸುವ ಪ್ರಯತ್ನ ಮಾಡಿದರೂ ಮಣಿಯದೆ ನಿಯಮದಂತೆ ಔಟ್ ಘೋಷಿಸಿದ್ದಾರೆ. ಎಂಜಿಲೋ ಮ್ಯಾಥ್ಯೂ ಹೆಲ್ಮೆಟ್ ನಲ್ಲಿ ಸಮಸ್ಯೆ ಇದ್ದ ಕಾರಣ ತಡವಾಯಿತು ಎಂದು ಹೇಳಿದರೂ ಅಂಪೈರ್ ಅವರ ಕಾರಣವನ್ನು ಪುರಸ್ಕರಿಸಲಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button