ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್ ಶಾಸಕ ಟಿಎಂಸಿ ಸೇರ್ಪಡೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಏಕೈಕ ಕಾಂಗ್ರೆಸ್ ಶಾಸಕ ಬೇರಾನ್ ಬಿಸ್ವಾಸ್ ಅವರು ಸೋಮವಾರ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಆಡಳಿತ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಯಾದರು.

ಮುರ್ಷಿದಾಬಾದ್ ಜಿಲ್ಲೆಯ ಅಲ್ಪಸಂಖ್ಯಾತ ಪ್ರಾಬಲ್ಯದ ಸಾಗರ್ದಿಘಿ ಕ್ಷೇತ್ರದ ಶಾಸಕ ಬಿಸ್ವಾಸ್  ಅವರು ಕಾಂಗ್ರೆಸ್ ತೊರೆದು ಇಂದು ಟಿಎಂಸಿ ಸೇರಿದರು.

“ಇಂದು, ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಜೋನೋ ಸಂಜೋಗ್ ಯಾತ್ರೆ ಸಮಯದಲ್ಲಿ, ಸಾಗರ್ದಿಘಿ ಕಾಂಗ್ರೆಸ್ ಶಾಸಕ ಬೇರೊನ್ ಬಿಸ್ವಾಸ್ ಅವರು ನಮ್ಮೊಂದಿಗೆ ಸೇರಿಕೊಂಡರು. ನಾವು ಅವರನ್ನು ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ! “ಬಿಜೆಪಿಯ ವಿಭಜಕ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವನ್ನು ಬಲಪಡಿಸಲು, ನೀವು ಸರಿಯಾದ ವೇದಿಕೆ ಆಯ್ಕೆ ಮಾಡಿದ್ದೀರಿ. ಒಟ್ಟಾಗಿ, ನಾವು ಗೆಲ್ಲುತ್ತೇವೆ!” ಎಂದು ಟಿಎಂಸಿ ಟ್ವೀಟ್ ಮಾಡಿದೆ.

Latest Indian news

Popular Stories