ಗುಜರಾತ್‌: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೋಗಸ್ ಟೋಲ್ ಪ್ಲಾಜಾ ಹಾಕಿದ್ದ ಐವರ ವಿರುದ್ಧ ಕೇಸ್ ದಾಖಲು

ಮೊರ್ಬಿ: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ವಾಹನ ಚಾಲಕರಿಂದ ಹಣ ಸುಲಿಗೆ ಮಾಡಲು ಬೋಗಸ್ ಟೋಲ್ ಪ್ಲಾಜಾ ಸ್ಥಾಪಿಸಿದ ಆರೋಪದ ಮೇಲೆ ಐವರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಬೋಗಸ್ ಟೋಲ್ ಪ್ಲಾಜಾ ನಡೆಸುತ್ತಿದ್ದ ಸ್ಥಗಿತಗೊಂಡ ಸೆರಾಮಿಕ್ ಘಟಕದ ಮಾಲೀಕ ಸೇರಿದಂತೆ ಐವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರಿ ಟೋಲ್ ನಾಕಾಕ್ಕೆ ಹೋಲಿಸಿದರೆ ಇಲ್ಲಿ ವಾಹನಗಳಿಂದ ಕಡಿಮೆ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಮರೀಶ್ ಪಟೇಲ್, ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ತನ್ನ ಮುಚ್ಚಿದ ಸೆರಾಮಿಕ್ ಘಟಕದ ಮೂಲಕ ಎರಡು ಗೇಟ್‌ಗಳನ್ನು ಸ್ಥಾಪಿಸಿದ್ದರು.

ಅಧಿಕೃತ ನಿರ್ವಾಹಕರು ನಿರ್ವಹಿಸುತ್ತಿರುವ ಟೋಲ್ ಪ್ಲಾಜಾವನ್ನು ಬೈಪಾಸ್ ಮಾಡಲು ಅವರು ವಾಹನಗಳ ಚಾಲಕರಿಗೆ ಒತ್ತಾಯಿಸುತ್ತಿದ್ದರು ಎಂದು ವಾಂಕನೇರ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐವರು ಆರೋಪಿಗಳ ಪೈಕಿ, ನಾಲ್ವರು, ಅಧಿಕೃತ ಸರ್ಕಾರಿ ಟೋಲ್ ಪ್ಲಾಜಾದಲ್ಲಿ ಪಾವತಿಸುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಬದಿಯಲ್ಲಿರುವ ನವ ವಘಸಿಯಾ ಗ್ರಾಮದ ಮೂಲಕ ಹಾದುಹೋಗಲು ವಾಹನಗಳ ಚಾಲಕರಿಗೆ ಒತ್ತಾಯಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Latest Indian news

Popular Stories