ನವದೆಹಲಿ: ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಏರಿಕೆಯ ಹಾದಿಯಲ್ಲೇ ಇದ್ದ ಟೊಮೆಟೋ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಗುರುವಾರ ಬಹುತೇಕ ಕಡೆಗಳಲ್ಲಿ ಕೆಜಿಗೆ ನೂರು ರೂಪಾಯಿಗಿಂತಲೂ ಕಡಿಮೆ ದರಕ್ಕೆ ಮಾರಾಟವಾಗಿದೆ.
ಬೆಲೆ ಸ್ಥಿರತೆ ಹಾಗೂ ಇನ್ನಷ್ಟು ಕಡಿಮೆಯಾಗಲು ಇನ್ನಷ್ಟು ಸಮಯ ಬೇಕಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಮಾರುಕಟ್ಟೆಗೆ ಸುತ್ತಮುತ್ತ ಜಿಲ್ಲೆಗಳಿಂದ ಟೊಮೆಟೋ ಬರುವ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.
ಕಳೆದ ವಾರ ಬೆಂಗಳೂರು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ . 140 ಗಡಿ ದಾಟಿದ್ದ ಟೊಮೆಟೋ ಪ್ರಸ್ತುತ ಕೆಜಿಗೆ 70-80 ದರದಂತೆ ವ್ಯಾಪಾರವಾಗಿದೆ. ಕೆಲವೆಡೆ 90ಗೆ ಮಾರಾಟಗಾರರು ಮಾರಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ 157 ರೂ. ಆಗಿದ್ದ ದರ 85 ರೂ. ಗೆ ಇಳಿದಿದೆ.