ಉತ್ತರಾಖಂಡ ವಿಧಾನಸಭೆಯಲ್ಲಿ UCC ಮಸೂದೆಗೆ ಅಂಗೀಕಾರ

ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯ ನಂತರ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂದರೆ ಯುಸಿಸಿಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಇದರೊಂದಿಗೆ ಉತ್ತರಾಖಂಡ ಇದೇ ರೀತಿಯ ಕಾನೂನನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ.

ಪ್ರಸ್ತಾವನೆ ಅಂಗೀಕಾರಕ್ಕೂ ಮುನ್ನ ಮಸೂದೆ ಕುರಿತು ಮಾತನಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ, ನಮ್ಮ ಸಂವಿಧಾನ ರಚನೆಕಾರರು ಕಂಡ ಕನಸು ಇಂದು ನನಸಾಗಲಿದೆ. ನಾವು ಇತಿಹಾಸ ಸೃಷ್ಟಿಸಲಿದ್ದೇವೆ. ದೇಶದ ಇತರೆ ರಾಜ್ಯಗಳೂ ಇದೇ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.

ಯುಸಿಸಿ ಮಸೂದೆ ಅಂಗೀಕರಿಸಿದ ನಂತರ ಅದನ್ನು ಈಗ ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಅಂಕಿತ ಹಾಕಿದ ಕೂಡಲೇ ಇದು ಕಾನೂನಾಗಿ ರೂಪುಗೊಳ್ಳಲಿದೆ. ಇದರೊಂದಿಗೆ ರಾಜ್ಯದ ಎಲ್ಲ ಜನರಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಆದಾಗ್ಯೂ, ಅದರ ನಿಬಂಧನೆಗಳು ಪರಿಶಿಷ್ಟ ಪಂಗಡದ (ST) ಜನರಿಗೆ ಅನ್ವಯಿಸುವುದಿಲ್ಲ. 2022ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯ ಭರವಸೆಯನ್ನು ಬಿಜೆಪಿ ನೀಡಿತ್ತು.

Latest Indian news

Popular Stories