ಉಡುಪಿ | ಕಾವೇರಿ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಬಾರದು | ಯಾವುದೇ ನೈತಿಕಪೊಲೀಸ್’ಗಿರಿ ನಾವು ಸಹಿಸಲ್ಲ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ದಿ ಹಿಂದುಸ್ತಾನ್ ಗಝೆಟ್ ಪ್ರತಿನಿಧಿ

ಉಡುಪಿ: ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ನ ಆದೇಶವನ್ನು ನಾವು ಪಾಲಿಸಬೇಕಾಗಿದೆ. ಇಂತಹ ಹೊತ್ತಿನಲ್ಲಿ ನಾವು ಮಳೆಗಾಗಿ ಪ್ರಾರ್ಥಿಸಬೇಕು. ನಾನು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದರು.

ನಮ್ಮ ರಾಜ್ಯಕ್ಕೆ ಅನ್ಯಾಯ ಆಗಬಾರದು ಎಂಬುದು ನನ್ನ ನಿಲುವುವಾಗಿದೆ. ಕಾಂಗ್ರೆಸ್ ಜನಪರವಾಗಿದೆ ಜನರನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮೂರು ದಿನ ದೆಹಲಿಯಲ್ಲಿದ್ದು ಈ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದರು.

ನೀರಾವರಿ ಮಂತ್ರಿಗಳು ಆ ಭಾಗದ ಜನನಾಯಕರು ಕೇಂದ್ರಕ್ಕೆ ಹೋಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕೈಕಟ್ಟಿ ಕುಳಿತಿಲ್ಲ.ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಸುಪ್ರೀಂ ನಲ್ಲಿ ವಾದ ಸರಿಯಾಗಿದೆಯೋ ಮಂಡನೆ ಸರಿಯಾಗಿಲ್ಲವೋ ಎಂಬುವ ಚರ್ಚೆ ಅಪ್ರಸ್ತುತ.ಮುಂದೆ ಏನಾಗಬೇಕು ಎಂಬುದಷ್ಟೇ ಸದ್ಯ ಚರ್ಚಿಸಬೇಕಾದ ವಿಚಾರ‌ ಎಂದರು

ಕಾಪು ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ವೀಡಿಯೋ ವೈರಲ್ ಆದ ಕುರಿತು ಮಾತನಾಡಿದ ಅವರು, ಯಾವುದೇ ನೈತಿಕ ಪೊಲೀಸ್ ಗಿರಿಯನ್ನು ನಾವು ಸಹಿಸಲ್ಲ. ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕಾನೂನಿಗೆ ತಲೆಬಾಗುವುದು ಭಾರತೀಯ ಪ್ರಜೆಯ ಕರ್ತವ್ಯ ಎಂದರು.

ಸಂಸತ್ ನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಬಿಲ್ ಪಾಸ್ ವಿಚಾರ

ಮೋದಿ ಅವರು ಈ ಆದೇಶವನ್ನು ತೆಗೆದುಕೊಂಡು ಬಂದಿದ್ದಾರೆ. ಮಹಿಳೆಯಾಗಿ ನಾನು ಇದನ್ನ ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ.ಕಾಂಗ್ರೆಸ್ ಹಿಂದಿನಿಂದಲೂ ಮಹಿಳೆಯರ ಪರವಾಗಿರುವ ಪಕ್ಷವಾಗಿದೆ. ಈ ಬಿಲ್ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಪ್ರಯತ್ನ ಪಟ್ಟಿತ್ತು ಎಂದರು.

ರಾಜೀವ್ ಗಾಂಧಿ 50% ಶೇಕಡಾ ಮೀಸಲಾತಿಯನ್ನು ತೆಗೆದುಕೊಂಡು ಬಂದರು. ಇಂಥ ಕೆಲಸವನ್ನು ಮಾಡಲು ಬಹಳ ದೊಡ್ಡ ಶಕ್ತಿ ಬೇಕಾಗುತ್ತದೆ.ನಾನು ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ.ಇಂದಿರಾಗಾಂಧಿ ಉಳುವವನೇ ಒಡೆಯ ಎಂಬ ಕಾನೂನು ಜಾರಿಗೆ ತಂದರು. ರಾಜೀವ್ ಗಾಂಧಿ 18ನೇ ವಯಸ್ಸಿಗೆ ಮತದಾನ ಹಕ್ಕನ್ನು ಜಾರಿಗೆ ತಂದರು.ಮೋದಿ ಅವರು ಬಹಳ ದೊಡ್ಡ ಕೆಲಸವನ್ನ ಮಾಡಿದ್ದಾರೆ ನಾನು ಶ್ಲಾಘಿಸುತ್ತೇನೆ ಎಂದರು.

ರಾಜ್ಯ ಸರ್ಕಾರದಿಂದ ಬರ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 14 ತಾಲ್ಲೂಕುಗಳು ಬರ ಪಟ್ಟಿಯಲ್ಲಿದೆ. ಬಡ ಬರಪೀಡಿತ ಪಟ್ಟಿ ಘೋಷಣೆ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಮಳೆ ಪ್ರಮಾಣ ಅಂಕಿ ಅಂಶಗಳನ್ನು ತೆಗೆದುಕೊಂಡು ಘೋಷಣೆ ಮಾಡಲಾಗುತ್ತದೆ ಎಂದ ಅವರು, ಎರಡನೇ ಲಿಸ್ಟ್ ಹೊರಬರುತ್ತದೆ , ಮಳೆ ಬರದಿದ್ದರೆ ಇನ್ನೂ ಕೆಲ ಜಿಲ್ಲೆ ಹೆಸರುಗಳು ಕೂಡ ಘೋಷಣೆಯಾಗುತ್ತದೆ ಎಂದು ಉಡುಪಿಯಲ್ಲಿ ಸಚಿವೆ, ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.

Latest Indian news

Popular Stories