Featured StoryINTERNATIONAL

ಇಸ್ರೇಲ್’ನಿಂದ ಚೀಪ್ ಪಾಲಿಟಿಕ್ಸ್: ತನ್ನ ಕೃತ್ಯ ಖಂಡಿಸಿದ ಕಾರಣಕ್ಕೆ ವಿಶ್ವಸಂಸ್ಥೆ ಅಧಿಕಾರಿಗಳಿಗೆ ವೀಸಾ ನಿರಾಕರಣೆ

ನವದೆಹಲಿ: ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹಮಾಸ್ ಏಕಾಏಕಿ ದಾಳಿ ನಡೆಸಿಲ್ಲ 65 ವರ್ಷದಿಂದ ಉಸಿರುಗಟ್ಟುವ ವಾತವರಣ ಸೃಷ್ಟಿಯಾಗಿತ್ತು ಎಂದಿದ್ದಾರೆ. ತನ್ನ ವಿರುದ್ದ‌ ಮಾತನಾಡಿದ ಏಕೈಕ ಕಾರಣಕ್ಕೆ ಇಸ್ರೇಲ್ ವಿಶ್ವಸಂಸ್ಥೆ ಅಧಿಕಾರಿಗಳಿಗೆ ವೀಸಾ ನಿರಾಕರಿಸಲು ಮುಂದಾಗಿದೆ.

ವಿಶ್ವಸಂಸ್ಥೆಯಲ್ಲಿರುವ ಇಸ್ರೇಲ್ ನ ರಾಯಭಾರಿ ಗಿಲಾಡ್ ಎರ್ಡಾನ್ ಈ ಬಗ್ಗೆ ಮಾಹಿತಿ ನೀಡಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಗುಟೆರೆಸ್ ಅವರ ಹೇಳಿಕೆಯಿಂದಾಗಿ ನಾವು ವಿಶ್ವಸಂಸ್ಥೆ ಪ್ರತಿನಿಧಿಗಳಿಗೆ ವೀಸಾ ನಿರಾಕರಿಸುತ್ತಿದ್ದೇವೆ ಎಂದು ಎರ್ಡನ್ ಆರ್ಮಿ ರೇಡಿಯೋಗೆ ಮಾಹಿತಿ ನೀಡಿದ್ದಾರೆ.

ಮಾನವೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್ ಗೆ ಈಗಾಗಲೇ ವೀಸಾ ನಿರಾಕರಿಸಿದ್ದೇವೆ ಎಂದು ಎರ್ಡನ್ ಆರ್ಮಿ ರೇಡಿಯೋಗೆ ತಿಳಿಸಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ’ ಎಂದು ಹೇಳುವ ಮೂಲಕ ಮಂಗಳವಾರ ನಡೆದ ಯುಎನ್ ಭದ್ರತಾ ಮಂಡಳಿಯ ಸಭೆಯಲ್ಲಿ ಗುಟೆರೆಸ್ ಇಸ್ರೇಲಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button