Featured StoryEducation

26 ಸಾವಿರ ಕೋಟಿಯ ಒಡೆಯ ಈ ಯುವಕ: 16 ನೇ ವಯಸ್ಸಿನಲ್ಲಿ MBBS, 22 ನೇ ವಯಸ್ಸಿನಲ್ಲಿ ಐ.ಎ.ಎಸ್ ನಂತರ….!

ಹೌದು, ಕೆಲವರು ಸಾಧನೆಗೆ ನಿಂತರೆ ಸಾಧಿಸುವವರೆಗೆ ವಿರಮಿಸುದಿಲ್ಲ. ಹೌದು ರಾಜಸ್ತಾನದ ಯುವಕನ ಸಾಧನೆ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದೆ.

ರೋಮನ್ ಸೈಮಿ ಈ ದೇಶದ ಯಶಸ್ವಿ ಉದ್ಯಮಿ. 26 ಸಾವಿರ ಕೋಟಿ ಉದ್ದಿಮೆ ಎಜು-ಟೆಕ್ ‘Unacademy’ ಸಂಸ್ಥೆಯ ಸಹ ಸಂಸ್ಥಾಪಕನ ಯಶಸ್ಸಿನ ಪಯಣ ಬಹಳಷ್ಟು ಕುತೂಹಲಕಾರಿ. ತನ್ನ 16 ನೇ ವಯಸ್ಸಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 21 ನೇ ವಯಸ್ಸಿನಲ್ಲಿ MBBS ಪದವಿ ಪೂರ್ಣಗೊಳಿಸಿ ಏಮ್ಸ್ ನಲ್ಲಿ ಸೇವೆ ಸಲ್ಲಿಸುತ್ತಾರೆ. ನಂತರ ವೈದ್ಯಕೀಯ ವೃತ್ತಿ ಬಿಟ್ಟು IAS ಪರೀಕ್ಷೆ ಬರೆದು ಉತ್ತೀರ್ಣರಾಗಿ ಮಧ್ಯ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಸೈನಿ ಇಷ್ಟಕ್ಕೆ ತೃಪ್ತರಾಗುದಿಲ್ಲ. ಅವರು ಗಳಿಸಿದ ಪದವಿಗಳು ಕೇವಲ ಸಾಧನೆಯಾಗಿತ್ತು ಆದರೆ ಅದು ಆಸಕ್ತಿಯಲ್ಲ ಆ ಕಾರಣಕ್ಕಾಗಿ ಅವರು ಅವನ್ನೆಲ್ಲ ತೊರೆದು ದೊಡ್ಡ ಸಾಧನೆಯ ನಿರೀಕ್ಷೆಯಲ್ಲಿರುತ್ತಾರೆ.

ಯೂಟ್ಯೂಬರ್ ಮತ್ತು ಇಂಜಿನಿಯರ್ ಆಗಿರುವ ಗೌರವ್ ಮುಂಜಾಲ್ ಅವರೊಂದಿಗೆ ಸೇರಿಕೊಂಡು “Unacademy” ಸಂಸ್ಥೆಯ ಹುಟ್ಟಿಗೆ ಕಾರಣರಾಗುತ್ತಾರೆ. ಐ.ಎ.ಎಸ್ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುವ ಈ ಸಂಸ್ಥೆ ಇಂದು ದೇಶದಲ್ಲೇ ಹೆಸರುವಾಸಿ.‌ಇದರ net worth 26 ಸಾವಿರ ಕೋಟಿ. ಸೈನಿ ಪಡೆಯುವ ವೇತನ 88 ಲಕ್ಷಕ್ಕೂ ಹೆಚ್ಚು. ಯುಟ್ಯೂಬ್ ಚಾನೆಲ್ ನೊಂದಿಗೆ ಆರಂಭವಾದ ಈ ಪಯಣ ಇಂದು ದೈತ್ಯವಾಗಿ ಬೆಳೆದಿದೆ. ಬುದ್ದಿವಂತಿಕೆಯೊಂದಿಗೆ ಛಲ ಇದ್ದರೆ ಯಾವುದೂ ಕೂಡ ಅಸಾಧ್ಯವಲ್ಲ ಎಂಬುವುದನ್ನು ಸೈನಿ ಸಾಧಿಸಿ ತೋರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button