US Elections 2024: ರೋಚಕ ಘಟ್ಟಕ್ಕೆ ತಲುಪಿದ ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ಹಿಂದಿಕ್ಕಿದ ಡೊನಾಲ್ಡ್ ಟ್ರಂಪ್, ತೀವ್ರ ಜಿದ್ದಾಜಿದ್ದಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ರೋಚಕ ಘಟ್ಟ ತಲುಪಿದೆ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ತಮ್ಮ ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಹಲವಾರು ರಾಜ್ಯಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.

ಡೊನಾಲ್ಡ್ ಟ್ರಂಪ್ ಅವರು ಅರ್ಕಾನ್ಸಾಸ್, ಒಕ್ಲಹೋಮ, ದಕ್ಷಿಣ ಕೆರೊಲಿನಾ, ಟೆನ್ನೆಸ್ಸೀ, ಫ್ಲೋರಿಡಾ, ಮಿಸ್ಸಿಸ್ಸಿಪ್ಪಿ, ವೆಸ್ಟ್ ವರ್ಜೀನಿಯಾ, ಇಂಡಿಯಾನಾ ಮತ್ತು ಕೆಂಟುಕಿ ರಾಜ್ಯಗಳಲ್ಲಿ ಮುಂದಿದ್ದಾರೆ.

ಕಮಲಾ ಹ್ಯಾರಿಸ್‌ ಅವರು ಡೆಲವೇರ್, ನ್ಯೂಜೆರ್ಸಿ, ರೋಡ್ ಐಲ್ಯಾಂಡ್, ಕನೆಕ್ಟಿಕಟ್, ಮೇರಿಲ್ಯಾಂಡ್ ಮತ್ತು ವರ್ಮೊಂಟ್ ಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿರುವುದು ಅಮೆರಿಕಾದ ಸ್ವಿಂಗ್ 7 ರಾಜ್ಯಗಳಿಂದ ಹೊರಹೊಮ್ಮುವ ಫಲಿತಾಂಶಕ್ಕೆ. ಇದರಿಂದ ಮುಂದಿನ ಅಮೆರಿಕಾ ಅಧ್ಯಕ್ಷರು ಯಾರಾಗುತ್ತಾರೆ ಎಂದು ನಿರ್ಧಾರವಾಗುತ್ತದೆ. ಅವುಗಳೆಂದರೆ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಚಿಗನ್, ಉತ್ತರ ಕೆರೊಲಿನಾ, ಜಾರ್ಜಿಯಾ, ಅರಿಜೋನಾ ಮತ್ತು ನೆವಾಡಾ ರಾಜ್ಯಗಳಾಗಿವೆ.

Latest Indian news

Popular Stories