ವಿಜಯಪುರ: ಜಿಲ್ಲೆಯ 110/11 ಕೆವ್ಹಿ ಮಟ್ಟಿಹಾಳ ಟ್ಯಾಪ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ 110/11 ಕೆವ್ಹಿ ಮಟ್ಟಿಹಾಳ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಬರುವ ಎಲ್ಲ 11 ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಹಾಗೂ ವಿಜಯಪುರ ನಗರ ಕುಡಿಯುವ ನೀರಿನ ಸ್ಥಾವರಗಳಿಗೆ & 33ಕೆವ್ಹಿ ಕಾರಜೋಳ ಎಲ್.ಆಯ್.ಎಸ್. ಮಾರ್ಗಗಳಿಗೆ ಅಕ್ಟೋಬರ್ 01 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.