ರಾಜಸ್ಥಾನ ಬಿಜೆಪಿಯಲ್ಲಿ ಸಿ.ಎಮ್ ಸ್ಥಾನಕ್ಕಾಗಿ ಕಚ್ಚಾಟ: ವಸುಂಧರೆ ರಜೆಯನ್ನು ಭೇಟಿಯಾದ 25 ಶಾಸಕರು!

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೇರಿದ್ದು, ಸಿಎಂ ಯಾರಾಗಲಿದ್ದಾರೆ? ಎಂಬ ಕುತೂಹಲ ಮೂಡಿದೆ.

ಈ ನಡುವೆ ಬಿಜೆಪಿಯ 25 ಶಾಸಕರು ಸೋಮವಾರ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಅವರನ್ನು ಭೇಟಿ ಮಾಡಿದ್ದಾರೆ. ವಸುಂಧರಾ ರಾಜೆ ಸಿಎಂ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಅಭ್ಯರ್ಥಿಯಾಗಿದ್ದು, ಇವರೊಂದಿಗೆ ಇನ್ನೂ ಕೆಲವರ ಹೆಸರು ಸಿಎಂ ಹುದ್ದೆಗೆ ಕೇಳಿಬಂದಿದೆ.

ವಸುಂಧರಾ ರಾಜೆ ಅವರನ್ನು ಭೇಟಿ ಮಾಡಿದ 25 ಶಾಸಕರು ಈ ಭೇಟಿಯನ್ನು ಕೇವಲ ಔಪಚಾರಿಕ ಭೇಟಿ ಎಂದು ಹೇಳಿದ್ದು, ಸಿಎಂ ಹುದ್ದೆಗೆ ರಾಜೆ ಅವರನ್ನು ಪಕ್ಷದ ನಾಯಕತ್ವ ಆಯ್ಕೆ ಮಾಡಿದರೆ, ಅದನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ನಾಸಿರಾಬಾದ್ ಶಾಸಕ ರಾಮಸ್ವರೂಪ್ ಲಂಬಾ ಮಾತನಾಡಿ, ಜನರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜೇ ಅವರ ಕಾರ್ಯಗಳನ್ನು ನೋಡಿದ್ದಾರೆ ಮತ್ತು ಸಿಎಂ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಪ್ರಧಾನಿ ಮೋದಿ ಮತ್ತು ವಸುಂಧರಾ ರಾಜೇ ಮಾಡಿದ ಕೆಲಸದಿಂದ ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories