ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣ: ಪ್ರಿಯಕರ ಅಕ್ಷಯ್ ದೋಖಾ – ಬಿಗ್ ಟ್ವಿಸ್ಟ್!

ಬೆಂಗಳೂರು, (ಜುಲೈ 27): ಬೆಂಗಳೂರಿನ (Bengaluru) ಮಾಡೆಲ್​ ವಿದ್ಯಾಶ್ರೀ (25) ಆತ್ಮಹತ್ಯೆ (Model Suicide Suicide) ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಸಿಕ್ಕ ಡೈರಿಯಲ್ಲಿ ಮಾಡೆಲ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಅಂಶಗಳು ಪತ್ತೆಯಾಗಿವೆ.

ಮಾಡೆಲ್​ ಆತ್ಮಹತ್ಯೆ ಹಿಂದೆ ಫೇಸ್​ಬುಕ್ ಪ್ರಿಯಕರನಿಂದ ಲವ್​ ಸೆಕ್ಸ್​ ದೋಖಾ ಬೆಳಕಿಗೆ ಬಂದಿದೆ. ಹೌದು…21/07/23ರಂದು ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ವಿದ್ಯಾಶ್ರೀ ಆತ್ಮಹತ್ಯೆಗೆ ಪ್ರಿಯಕರನೇ ವಿಲನ್ ಎನ್ನುವ ಅಂಶ ಡೈರಿ ಹೇಳುತ್ತಿದೆ. ಡೈರಿಯಲ್ಲಿ ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿಶ್ರೀ ಡೈರಿಯಲ್ಲಿ ಡೆತ್​ ನೋಟ್​ ಬರೆದಿಟ್ಟಿದ್ದು, ತನ್ನ ಸಾವಿಗೆ ಪ್ರಿಯಕರ ಅಕ್ಷಯ್​ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಸಾವಿಗೆ ಅಕ್ಷಯ್ ಕಾರಣ. ನನ್ನನ್ನ ಒಂದು ನಾಯಿ ತರ ನೋಡುತ್ತಿದ್ದ. ನನಗೆ ಕೊಡಬೇಕಾದ ಹಣ ಕೇಳಿದ್ರೆ ನಮ್ಮ ಮನೆಯವರಿಗೆ ಕೆಟ್ಟ ಮಾತಿನಿಂದ ನಿಂದನೆ ಮಾಡಿದ್ದಾನೆ. ನನಗೆ ಮಾನಸಿಕ ಹಿಂಸೆ ಆಗಿದೆ. ನನಗೆ ಬದುಕಲು ಆಗಿತ್ತಿಲ್ಲ. ಅಮ್ಮ,ತಮ್ಮನಿಗೆ ಕ್ಷಮೆ ಇರಲಿ. ಎಲ್ಲಾ ಹುಡುಗಿಯರಿಗೆ ವಿನಂತಿ. ಯಾರನ್ನು ನಂಬಿ ಪ್ರೀತಿ ಮಾಡಬೇಡಿ ಗುಡ್ ಬೈ ಎಂದು ಡೈರಿಯಲ್ಲಿ ಡೆತ್​ ನೋಟ್​ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.

Latest Indian news

Popular Stories