ಕಾವೇರಿ ನೀರು ಬಿಡುವ ವಿಚಾರ ಸರ್ಕಾರ ಸಮರ್ಥವಾಗಿ ಎದುರಿಸಿದೆ: ಸಚಿವ ಶಿವಾನಂದ ಪಾಟೀಲ

ವಿಜಯಪುರ: ಕಾವೇರಿ ನೀರು ಬಿಡುವ ವಿಚಾರವನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ ನಮ್ಮ ಸರ್ಕಾರ ಸಮರ್ಥವಾಗಿ ಕಾವೇರಿ ಜಲ ವಿವಾದ ನಿಭಾಯಿಸದಿದ್ದರೆ ಈ ಹಿಂದೆ ಎಸ್ಎಂ ಕೃಷ್ಣ ಅವರ ಸರ್ಕಾರದಲ್ಲಿ ಏನಾಗಿತ್ತು ಎಂಬುದು ನಮಗೆಲ್ಲ ಗೊತ್ತಿದೆ ಎಂದು ಸಚಿವ ಶಿವಾನಂದ್ ಪಾಟೀಲ್ ಹೇಳಿದರು.

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಕುರಿತು ಈಗಾಗಲೇ ದೆಹಲಿಯಲ್ಲಿ ನೀರಾವರಿ ಸಚಿವ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಹಾಗೂ ಸಿಎಂ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರ ಈ ವಿಚಾರವನ್ನು ಸಮರ್ಥವಾಗಿ ಎದುರಿಸಿದೆ. ಕಾವೇರಿ ನೀರು ವಿಚಾರದಲ್ಲಿ ನ್ಯಾಯಾಲಯಕ್ಕೂ ಮಾನ್ಯತೆ ನೀಡಬೇಕು ರೈತರ ಹಿತವನ್ನು ಕಾಪಾಡಬೇಕು ಎಂದು ಹೇಳಿದರು.
ಇನ್ನು ನ್ಯಾಯಾಲಯದಲ್ಲಿ ಕಾವೇರಿ ನೀರು ಬಿಡೋ ವಿಚಾರದಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ನ ಲ್ಲಿ ಯಾವ ವ್ಯಾಜ್ಯ ಮುಗಿದಿದೆ ಹೇಳಿ ಎಂದು ಪ್ರಶ್ನಿಸಿದ ಅವರು, ಜಲ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದ್ದರೆ ಈ ರಾಜ್ಯಗಳ ರಾಜ್ಯಗಳ ವ್ಯಾಜ್ಯಗಳು ಇಷ್ಟು ದಿನ ನಡೆಯುತ್ತಿರಲಿಲ್ಲ, ಹಿಂದೆ ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿತ್ತು ಈಗಾ ಯಾಕೆ ಇಲ್ಲಾ ಎಂದು ಪ್ರಶ್ನಿಸಿದರು.

ನಾವು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಜೊತೆ ಹೋರಾಟ ಮಾಡಬೇಕಾಗಿದೆ. ಅಂತರಾಜ್ಯ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ಈ ಸಮಸ್ಯೆ ಬಗೆ ಹರಿಯಲು ಸರಳವಾಗುತ್ತದೆ. ಜಲ ವಿವಾದದ ವ್ಯಾಜ್ಯಗಳು ಹಾಗೆ ಮುಂದುವರೆದರೆ ಆಯಾ ರಾಜ್ಯಗಳಿಗೆ ಹಾಗೂ ಜನರಿಗೆ ಹಾನಿಯಾಗುತ್ತದೆ ಎಂದು ಹೇಳಿದರು.

Latest Indian news

Popular Stories