
Featured StoryVijayapura
ವಿಜಯಪುರ : ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಮೃತ್ಯು
ವಿಜಯಪುರ : ಕುರಿಗಾಯಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಹತ್ತಿರ ಸಂಭವಿಸಿದೆ.
ಮೃತ ಕುರಿಗಾಯಿಯನ್ನು ಚಿಕ್ಕೋಡಿ ಮೂಲದ ನಿಂಗಪ್ಪ ಹಾಲಪ್ಪ ಕದ್ದಿ (50) ಎಂದು ಗುರುತಿಸಲಾಗಿದೆ.
ಇನ್ನು ಬೈಕ್ ಸವಾರ ಕವಡಿಮಟ್ಟಿ ಗ್ರಾಮದ ಹಣಮಂತ ನಿಂಗಪ್ಪ ಮಾದರಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




