ವಿಜಯಪುರ: ಖರ್ಗೆ ಬಗ್ಗೆ ಮಾಜಿ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

ವಿಜಯಪುರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪ.ಜಾತಿ ವಿಭಾಗದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಹಳೆಯ ವರ್ಣನೀತಿಯನ್ನು ಪುನರುಚ್ಚರಿಸಿ ಅಸಂವಿದಾನಿಕ ಶಬ್ದ ಬಳಸಿ ಅವರ ಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನಿಂದಿಸಿದನ್ನು ಖಂಡಿಸಿ ಮತ್ತು ಕೆಪಿಸಿಸಿ ಕರ್ಯಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆಯವರ ಬಗ್ಗೆ ಲಗುವಾಗಿ ಮಾತನಾಡಿದನ್ನು ಖಂಡಿಸಿ ನಗರದ ಡಾ|| ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪ.ಜಾತಿ ವಿಭಾಗದಿಂದ ಪ್ರತಿಭಟನೆ ಮಾಡಲಾಯಿತು.


ಪ್ರತಿಭಟನೆಯನ್ನದ್ದೇಶಿಸಿ ನಾಗಠಾಣ ಶಾಸಕ ವಿಠ್ಠಲ ಕಟಗದೊಂಡ ಮಾತನಾಡಿ ಬಿಜೆಪಿಯವರ ಮನುವಾದಿ ದೋರಣೆಯನ್ನು ಖಂಡಿಸಿ ಕೂಡಲೆ ಅವರ ಪ್ರಕರಣ ದಾಖಲಿಸಿ ಬಂದಿಸಲು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಪ.ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ ಮಾಜಿ ಸಚಿವ ಒಬ್ಬ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಬೆಳವಣಿಗೆಯನ್ನು ಸಹಿಸದೆ ದಲಿತ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ಸಣ್ಣತನವನ್ನು ಎತ್ತಿ ತೋರಿಸಿದ್ದಾರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಹಾಗೂ ರಾಜ್ಯಪಾಲರು ಅರಗ ಜ್ಞಾನೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಒಂದು ವೇಳೆ ಬಿಜೆಪಿ ಯವರು ತಮ್ಮ ಚಾಳಿಯನ್ನು ಬಿಡದಿದ್ದರೆ ದೇಶಾದ್ಯಾಂತ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದಿಂದ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ , ಕೆಪಿಸಿಸಿ ಸದಸ್ಯರಾದ ಅಬ್ದುಲ ಹಮೀದ ಮುಶ್ರೀಪ್, ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಶ್ರೀಮತಿ ಭಾರತಿ ನಾವಿ, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

Latest Indian news

Popular Stories